ಬುಧವಾರ, ನವೆಂಬರ್ 25, 2020
21 °C

ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ: ಕ್ರಿಸಿಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಧ್ಯಪ್ರವೇಶದಿಂದಾಗಿ ದೇಶದ ಆರ್ಥಿಕ ಸ್ಥಿತಿಯು ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿದ ಬಿಕ್ಕಟ್ಟಿನಿಂದ ಹೊರಬಂದು ಬಹಳ ವೇಗವಾಗಿ ಚೇತರಿಕೆ ಕಂಡುಕೊಳ್ಳುತ್ತಿದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಬಡ್ಡಿದರ ಕಡಿತಕ್ಕೆ ಸಂಬಂಧಿಸಿದಂತೆ ಆರ್‌ಬಿಐ ತಾಳಿದ ಹೊಂದಾಣಿಕೆಯ ನಿಲುವಿನಿಂದಾಗಿ ಆರ್ಥಿಕ ಸ್ಥಿತಿಯ ಮೇಲಿನ ಒತ್ತಡವು ಅಲ್ಪಾವಧಿಗೆ ಕಡಿಮೆ ಆಗಿದೆ. ಆರ್ಥಿಕತೆಗೆ ಸಾಂಕ್ರಾಮಿಕವು ಮಾಡಿದ್ದ ಹಾನಿಯನ್ನು ಸರಿಪಡಿಸಲು ಕೇಂದ್ರೀಯ ಬ್ಯಾಂಕ್‌ನ ಕ್ರಮಗಳು ನೆರವಾಗಿವೆ ಎಂದು ಅದು ಹೇಳಿದೆ.

ಆರ್ಥಿಕ ವ್ಯವಸ್ಥೆಯ ಮೇಲಿನ ಒತ್ತಡವು ಇನ್ನೂ ಇದೆ ಎಂದೂ ಹೇಳಿರುವ ಕ್ರಿಸಿಲ್‌, ‘ಬ್ಯಾಂಕ್‌ ಸಾಲ ನೀಡಿಕೆಯ ಬೆಳವಣಿಗೆ ದುರ್ಬಲವಾಗಿದೆ. ಸರ್ಕಾರದ ಸಾಲ ಸಂಗ್ರಹವು ಗರಿಷ್ಠ ಮಟ್ಟದಲ್ಲಿ ಇದೆ’ ಎಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು