ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಫ್‌ಎಂಸಿಜಿ ಬೆಳವಣಿಗೆ ಶೇ 8.6: ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ

Published 7 ನವೆಂಬರ್ 2023, 16:24 IST
Last Updated 7 ನವೆಂಬರ್ 2023, 16:24 IST
ಅಕ್ಷರ ಗಾತ್ರ

ನವದೆಹಲಿ: ಎಫ್‌ಎಂಸಿಜಿ ಉದ್ಯಮವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.6ರಷ್ಟು ಬೆಳವಣಿಗೆ ಕಂಡಿದೆ.  ಹಣದುಬ್ಬರ ಕಡಿಮೆ ಆಗಿದ್ದರಿಂದ ಜನರು ಖರೀದಿಸುವ ಪ್ರಮಾಣ ಹೆಚ್ಚಾಗಿದೆ. ಇದು ಉದ್ಯಮದ ಬೆಳವಣಿಗೆಗೆ ಕಾರಣವಾಯಿತು ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ ಹೇಳಿದೆ.

ಗ್ರಾಮೀಣ ಮಾರುಕಟ್ಟೆಯು ಹಲವು ತ್ರೈಮಾಸಿಕಗಳ ಬಳಿಕ ಚೇತರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ನಗರ ಮಾರುಕಟ್ಟೆಯು ಸ್ಥಿರವಾದ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ ಎಂದು ಈಚಿನ ವರದಿಯಲ್ಲಿ ತಿಳಿಸಿದೆ.

ನಿರುದ್ಯೋಗ ಪ್ರಮಾಣ ಇಳಿಕೆ ಮತ್ತು ಎಲ್‌ಪಿಜಿ ದರ ಕಡಿಮೆ ಆಗಿರುವುದು ಜನರನ್ನು ಖರೀದಿ ಮಾಡುವುದರತ್ತ ಗಮನ ಹರಿಸುವಂತೆ ಮಾಡಿದೆ ಎಂದು ಅದು ಹೇಳಿದೆ. ಆಹಾರ ಉತ್ಪನ್ನಗಳ ಮಾರಾಟವು ಕಳೆದ ವರ್ಷದಷ್ಟೇ ಶೇ 8.7ರಷ್ಟು ಇದೆ. ಈ ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 8.5ರಷ್ಟು ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT