ಶುಕ್ರವಾರ, ಮೇ 29, 2020
27 °C

ಆಹಾರ ಉತ್ಪಾದನೆ ಇಳಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : 2018–19ನೆ ಸಾಲಿನ ಆಹಾರ ಧಾನ್ಯಗಳ ಉತ್ಪಾದನೆಯು 28.13 ಕೋಟಿ ಟನ್‌ಗಳಷ್ಟಾಗಲಿದ್ದು, ಇದು ಹಿಂದಿನ ವರ್ಷದ ಉತ್ಪಾದನೆಗಿಂತ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ.

2017–18ರ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) 28.48 ಕೋಟಿ ಟನ್‌ಗಳಷ್ಟು ಆಹಾರ ಉತ್ಪಾದನೆಯಾಗಿತ್ತು.

ಅಕ್ಕಿ ಉತ್ಪಾದನೆಯು ದಾಖಲೆ ಪ್ರಮಾಣದಲ್ಲಿ ಇದ್ದರೂ, ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆಯು 28.13 ಕೋಟಿ ಟನ್‌ಗಳಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಕೆಲ ದಿನಗಳ ನಂತರ ಇನ್ನಷ್ಟು ಖಚಿತ ಮಾಹಿತಿ ಲಭ್ಯವಾದಾಗ ಉತ್ಪಾದನಾ ಅಂಕಿ ಅಂಶಗಳು ಪರಿಷ್ಕರಣೆಗೊಳ್ಳಬಹುದು ಎಂದೂ ಕೇಂದ್ರ ಕೃಷಿ ಸಚಿವಾಲಯವು ತಿಳಿಸಿದೆ.

ಮುಂಗಾರು ಹಂಗಾಮಿನಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿಯ ಶೇ 9ರಷ್ಟು ಕಡಿಮೆ ಮಳೆಯಾಗಿದೆ.

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಹಾರಧಾನ್ಯ, ತೈಲಬೀಜ, ಹತ್ತಿ, ಕಬ್ಬು, ಹಣ್ಣು, ತರಕಾರಿಗಳ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿದೆ. ಇದರಿಂದ ಬೆಲೆಗಳು ಅಗ್ಗವಾಗಿ ಬೆಳೆಗಾರರಿಗೆ ಕಡಿಮೆ ಲಾಭ ಸಿಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು