ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

Last Updated 23 ಮಾರ್ಚ್ 2019, 17:22 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ ಮಾರ್ಚ್‌ 15ಕ್ಕೆ ಕೊನೆಗೊಂಡ ವಾರದಲ್ಲಿ ₹ 24,840 ಕೋಟಿಗಳಷ್ಟು ಹೆಚ್ಚಾಗಿ ₹ 28.01 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ವಿದೇಶಿ ಕರೆನ್ಸಿಗಳ ಸಂಗ್ರಹದಲ್ಲಿ ಆಗಿರುವ ಹೆಚ್ಚಳದಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿಯೂ ಏರಿಕೆ ಕಂಡಬಂದಿದೆ ಎಂದು ತಿಳಿಸಿದೆ.

ಅದಕ್ಕೂ ಹಿಂದಿನ ವಾರದಲ್ಲಿ₹ 27.73 ಲಕ್ಷ ಕೋಟಿಗಳಷ್ಟಿತ್ತು.

ಚಿನ್ನದ ಮೀಸಲು ಸಂಗ್ರಹ ₹ 268 ಕೋಟಿಗಳಷ್ಟು ಹೆಚ್ಚಾಗಿ ₹ 1.62 ಲಕ್ಷ ಕೋಟಿಗಳಿಗೆ ತಲುಪಿದೆ.

ಐಎಫ್‌ಎಫ್‌ನಲ್ಲಿನ ಭಾರತದ ಮೀಸಲು ಸಂಗ್ರಹ ₹ 20,700 ಕೋಟಿಗಳಷ್ಟಿದೆ.

ಸೇವಾ ವಲಯದ ಚಟುವಟಿಕೆ ಹೆಚ್ಚಳ

ದೇಶದ ಸೇವಾ ವಲಯದ ಚಟುವಟಿಕೆಗಳು ಫೆಬ್ರುವರಿಯಲ್ಲಿ ಚೇತರಿಕೆ ಹಾದಿಗೆ ಮರಳಿವೆ ಎಂದು ನಿಕೇಯ್‌ ಇಂಡಿಯಾ ಸಂಸ್ಥೆ ಹೇಳಿದೆ.

ಹೊಸ ಯೋಜನೆಗಳು, ತಯಾರಿಕೆ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿಯಿಂದಾಗಿ ಸೇವಾ ವಲಯದ ಪ್ರಗತಿ ಸೂಚಿಸುವ ನಿಕೇಯ್‌ ಇಂಡಿಯಾ ಸರ್ವೀಸಸ್‌ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ 52.2 ರಿಂದ 52.5ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT