ವಿದೇಶಿ ವಿನಿಮಯ ಸಂಗ್ರಹ ಏರಿಕೆ

ಶನಿವಾರ, ಮಾರ್ಚ್ 23, 2019
24 °C

ವಿದೇಶಿ ವಿನಿಮಯ ಸಂಗ್ರಹ ಏರಿಕೆ

Published:
Updated:

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್‌ 1ಕ್ಕೆ ಕೊನೆಗೊಂಡ ವಾರದಲ್ಲಿ ₹ 18,130 ಕೋಟಿಗಳಷ್ಟು ಹೆಚ್ಚಾಗಿ ಮತ್ತೊಮ್ಮೆ ₹ 28 ಲಕ್ಷ ಕೋಟಿಯ ಗಡಿ ತಲುಪಿದೆ. ಅದಕ್ಕೂ ಹಿಂದಿನ ವಾರ ₹ 28.12 ಲಕ್ಷ ಕೋಟಿಗೆ ತಲುಪಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.

2018ರ ಏಪ್ರಿಲ್ 13ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 29.82 ಲಕ್ಷ ಕೋಟಿಗಳಿಗೆ ತಲುಪಿತ್ತು. ಆ ಬಳಿಕ  ₹ 1.75 ಲಕ್ಷ ಕೋಟಿಗಳಷ್ಟು ಇಳಿಕೆ ಕಂಡಿತ್ತು. ಚಿನ್ನದ ಮೀಸಲು ಸಂಗ್ರಹ ₹ 341 ಕೋಟಿ ಹೆಚ್ಚಾಗಿ ₹ 1.62 ಲಕ್ಷ ಕೋಟಿಗೆ ಏರಿಕೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !