ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

Last Updated 11 ಮಾರ್ಚ್ 2023, 11:06 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮಾರ್ಚ್‌ 3ಕ್ಕೆ ಕೊನೆಗೊಂಡ ವಾರದಲ್ಲಿ ₹11,972 ಕೋಟಿ ಹೆಚ್ಚಾಗಿದ್ದು ₹46.11 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ವಿದೇಶಿ ಕರೆನ್ಸಿಗಳ ಸಂಗ್ರಹ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ. ಮಾರ್ಚ್ 3ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ₹9,840 ಕೋಟಿಯಷ್ಟು ಹೆಚ್ಚಾಗಿ ಒಟ್ಟು ಸಂಗ್ರಹವು ₹40.75 ಲಕ್ಷ ಕೋಟಿಗೆ ತಲುಪಿದೆ. ಚಿನ್ನದ ಮೀಸಲು ಸಂಗ್ರಹ ₹ 3.42 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಆರ್‌ಬಿಐ ನೀಡಿರುವ ಮಾಹಿತಿಯ ಪ್ರಕಾರ, ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ಮಾರ್ಚ್‌ 3ರ ಅಂತ್ಯಕ್ಕೆ ₹41,492 ಕೋಟಿಗೆ ತಲುಪಿದೆ.

ಮಾರ್ಚ್‌ 3ಕ್ಕೂ ಹಿಂದಿನ ಮೂರು ವಾರಗಳಲ್ಲಿ ಮೀಸಲು ಸಂಗ್ರಹವು ಒಟ್ಟು ₹1.29 ಲಕ್ಷ ಕೋಟಿಯಷ್ಟು ಇಳಿಕೆ ಕಂಡಿತ್ತು. ಫೆಬ್ರುವರಿ 10ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ಸಂಗ್ರಹವು ₹68,224 ಕೊಟಿಯಷ್ಟು ಹೆಚ್ಚಿನ ಕುಸಿತ ಕಂಡಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಒತ್ತಡಕ್ಕೆ ಒಳಗಾಗಿರುವುದರಿಂದ ಮೀಸಲು ಸಂಗ್ರಹ ಕಡಿಮೆ ಆಗುತ್ತಿದೆ. ರೂಪಾಯಿ ಹೆಚ್ಚಿನ ಕುಸಿತ ಕಾಣದಂತೆ ತಡೆಯಲು ಆರ್‌ಬಿಐ ಮಧ್ಯಪ್ರವೇಶ ಮಾಡುತ್ತಿದೆ. 2022ರಲ್ಲಿ ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್‌ಬಿಐ ತನ್ನ ಮೀಸಲು ಸಂಗ್ರಹದಿಂದ ₹9.43 ಲಕ್ಷ ಕೋಟಿ ವೆಚ್ಚ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT