ಗಾರ್ಮಿನ್‌ ಇಂಡಿಯಾದ ಎಕ್ಸ್‌ಪೀರಿಯನ್ಸ್‌ ಸೆಂಟರ್‌

ಮಂಗಳವಾರ, ಮಾರ್ಚ್ 26, 2019
33 °C

ಗಾರ್ಮಿನ್‌ ಇಂಡಿಯಾದ ಎಕ್ಸ್‌ಪೀರಿಯನ್ಸ್‌ ಸೆಂಟರ್‌

Published:
Updated:

ಬೆಂಗಳೂರು: ಬಹು ಬಳಕೆ ಉದ್ದೇಶದ ಸ್ಮಾರ್ಟ್‌ವಾಚ್‌ ತಯಾರಿಸುವ ಬಹುರಾಷ್ಟ್ರೀಯ ಸಂಸ್ಥೆ ಗಾರ್ಮಿನ್‌ ಲಿಮಿಟೆಡ್‌ನ ಅಂಗಸಂಸ್ಥೆ ಗಾರ್ಮಿನ್ ಇಂಡಿಯಾ, ಬೆಂಗಳೂರಿನಲ್ಲಿ ತನ್ನ ಮೊದಲ ಎಕ್ಸಪೀರಿಯನ್ಸ್ ಸೆಂಟರ್‌ ಆರಂಭಿಸಿದೆ.

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಆರಂಭಿಸಲಾಗಿರುವ ಅತ್ಯಾಧುನಿಕ ಶೈಲಿಯ ಈ ವಿಶೇಷ ಮಳಿಗೆಯಲ್ಲಿ ವಿವೊ, ಫೆನಿಕ್ಸ್, ಎಡ್ಜ್, ಎಫ್‍ಆರ್ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ಇನ್‍ಸ್ಟಿಕ್ಟ್ ಸರಣಿಯ ಸ್ಮಾರ್ಟ್‌ ವಾಚ್‌ಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಬಹುದು.

‘ಸ್ಮಾರ್ಟ್‌ ವಾಚ್‌ಗಳ ಖರೀದಿಗೆ ಮುನ್ನ ಅವುಗಳನ್ನು ಸ್ಪರ್ಶಿಸಿ ವೈಶಿಷ್ಟಗಳನ್ನು ತಿಳಿದುಕೊಳ್ಳಲು ಅವಕಾಶ ಇರಬೇಕೆಂಬ ಗ್ರಾಹಕರ ಬೇಡಿಕೆ ಈಡೇರಿಸಲು ಈ ಕೇಂದ್ರ ಆರಂಭಿಸಲಾಗಿದೆ’ ಎಂದು ಸಂಸ್ಥೆಯ ರಾಷ್ಟ್ರೀಯ ಮಾರಾಟ ಮ್ಯಾನೇಜರ್ ಅಲಿ ರಿಜ್ವಿ ಅವರು ಹೇಳಿದ್ದಾರೆ.

‘ದೈಹಿಕ ಕಸರತ್ತಿನ ಮೇಲೆ ಸಮಗ್ರ ನಿಗಾ ಇರಿಸುವುದು ಈ ಸ್ಮಾರ್ಟ್‌ವಾಚ್‌ಗಳ ಮುಖ್ಯ ಕಾರ್ಯವಾಗಿದೆ. ಮಳಿಗೆಯಲ್ಲಿ ರನ್ನಿಂಗ್ ಟ್ರೆಡ್‍ಮಿಲ್ ಮತ್ತು ಇಂಡೋರ್ ಸೈಕ್ಲಿಂಗ್ ಟ್ರೈನರ್ ಕೂಡಾ ಇದೆ. ಸ್ಮಾರ್ಟ್‌ವಾಚ್‌ಗಳ ಕಾರ್ಯಕ್ಷಮತೆಯನ್ನು ಗ್ರಾಹಕರು ಇಲ್ಲಿ ಪರೀಕ್ಷಿಸಬಹುದು. ಸ್ಮಾರ್ಚ್‌ವಾಚ್‌ಗಳ ಬೆಲೆ ₹ 8 ಸಾವಿರದಿಂದ ₹ 80 ಸಾವಿರದವರೆಗೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !