ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 4.7ರಷ್ಟು ಆರ್ಥಿಕ ವೃದ್ಧಿ ದರಇಂಡಿಯಾ ರೇಟಿಂಗ್ಸ್‌ ಅಂದಾಜು

ದ್ವಿತೀಯ ತ್ರೈಮಾಸಿಕದಲ್ಲಿನ ಪ್ರಗತಿ ನಿರೀಕ್ಷೆ
Last Updated 26 ನವೆಂಬರ್ 2019, 12:47 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಜುಲೈ – ಸೆಪ್ಟೆಂಬರ್‌ನ ಅವಧಿಯಲ್ಲಿಯೂ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಸತತ 6ನೇ ತ್ರೈಮಾಸಿಕದಲ್ಲಿಯೂ ಮಂದಗತಿಯಲ್ಲಿ ಇರುವ ನಿರೀಕ್ಷೆ ಇದೆ.

ಜಾಗತಿಕ ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಫಿಚ್‌ ಗ್ರೂಪ್‌ನ ಅಂಗಸಂಸ್ಥೆ ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ನ ಅಂದಾಜಿನ ಪ್ರಕಾರ, ದ್ವಿತೀಯ ತ್ರೈಮಾಸಿಕದಲ್ಲಿ ವೃದ್ಧಿ ದರವು ಶೇ 4.7ರಷ್ಟು ಇರಲಿದೆ. ಮೊದಲ ತ್ರೈಮಾಸಿಕದಲ್ಲಿ ‘ಜಿಡಿಪಿ’ ಶೇ 5ರಷ್ಟು ಮಾತ್ರ ಪ್ರಗತಿ ದಾಖಲಿಸಿತ್ತು.

ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಕಾರ್ಪೊರೇಟ್‌ ತೆರಿಗೆ ಕಡಿತವೂ ಸೇರಿದಂತೆ ಉದ್ದಿಮೆ ವಲಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದರೂ ಆರ್ಥಿಕ ಬೆಳವಣಿಗೆ ದರದಲ್ಲಿ ಗಮನಾರ್ಹ ಪ್ರಗತಿ ಕಂಡುಬರುವ ಲಕ್ಷಣಗಳು ಕಂಡುಬರುತ್ತಿಲ್ಲ.

ಬ್ಯಾಂಕ್‌ಗಳ ಪುನರ್ಧನ, 10 ಬ್ಯಾಂಕ್‌ಗಳನ್ನು 4 ಬ್ಯಾಂಕ್‌ಗಳಾಗಿ ವಿಲೀನಗೊಳಿಸುವ ಪ್ರಕ್ರಿಯೆ, ವಾಹನ ತಯಾರಿಕೆ ಉದ್ದಿಮೆಗೆ ನೆರವು, ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಹೆಚ್ಚಳ, ನವೋದ್ಯಮಗಳಿಗೆ ತೆರಿಗೆ ಪ್ರಯೋಜನಗಳನ್ನು ಘೋಷಿಸಲಾಗಿದೆ.

ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ವೃದ್ಧಿ ದರವು ಈ ಹಿಂದೆ ಅಂದಾಜಿಸಿರುವ ಮಟ್ಟಕ್ಕಿಂತ ಕಡಿಮೆ (ಶೇ 6.2) ಇರಲಿದೆ. 2019–20ನೇ ಹಣಕಾಸು ವರ್ಷದ ಒಟ್ಟಾರೆ ‘ಜಿಡಿಪಿ’ ಬೆಳವಣಿಗೆಯು ಶೇ 5.6ರಷ್ಟು ಇರಲಿದೆ ಎಂದು ಸಂಸ್ಥೆಯು ತನ್ನ ಈ ಮೊದಲಿನ ಅಂದಾಜನ್ನು ನಾಲ್ಕನೇ ಬಾರಿಗೆ ಪರಿಷ್ಕರಿಸಿದೆ.

ಇದೇ ಶುಕ್ರವಾರ ದ್ವಿತೀಯ ತ್ರೈಮಾಸಿಕದ ಜಿಡಿಪಿ ದರವನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT