ನವದೆಹಲಿ: ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವ ಚಿನ್ನದಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿ ಗ್ರಾಂಗೆ₹ 3,119ರಂತೆ ನಿಗದಿಪಡಿಸಿದೆ.

ಆನ್‌ಲೈನ್‌ನಲ್ಲಿ ಖರೀದಿಸುವವರು ಮತ್ತು ನಗದುರಹಿತ (ಡಿಜಿಟಲ್) ರೂಪದಲ್ಲಿ ಪಾವತಿಸುವವರಿಗೆಬಾಂಡ್‌ನ ನೀಡಿಕೆ ಬೆಲೆಯಲ್ಲಿ ಪ್ರತಿ ಗ್ರಾಂಗೆ₹ 50ರಂತೆ ಕಡಿತ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ಹೂಡಿಕೆದಾರರಿಗೆ ಪ್ರತಿ ಗ್ರಾಂಚಿನ್ನದಬೆಲೆ₹ 3,069ರಂತೆ ಇರಲಿದೆ.

ಮುಂದಿನ ವರ್ಷದ ಫೆಬ್ರುವರಿವರೆಗೆ ಪ್ರತಿ ತಿಂಗಳೂ ಚಿನ್ನದಬಾಂಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.

ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.

ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಚಲಾವಣೆಗೆ ತರುವ ಮತ್ತು ಜನರ ಉಳಿತಾಯ ಮನೋಭಾವ ಬದಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2015ರಲ್ಲಿಚಿನ್ನದಬಾಂಡ್ ಯೋಜನೆ ಜಾರಿಗೆ ತಂದಿತ್ತು.

ಯೋಜನೆಯ ವಿವರ

ಈ ಯೋಜನೆಯಡಿಬಾಂಡ್‌ಗಳನ್ನು ಒಂದು ಗ್ರಾಂಚಿನ್ನದರೂಪದಲ್ಲಿ ನೀಡಲಾಗುವುದು. ಹೂಡಿಕೆ ಮಿತಿ ಕನಿಷ್ಠ1 ಗ್ರಾಂ ಒಂದು ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ ಗರಿಷ್ಠ 4 ಕೆ.ಜಿ. ಮತ್ತು ಟ್ರಸ್ಟ್‌ಗಳಿಗೆ 20 ಕೆ.ಜಿವರೆಗೆ ಖರೀದಿ ಮಿತಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.