ಶನಿವಾರ, ಜನವರಿ 23, 2021
28 °C

ಚಿನ್ನದ ಇಟಿಎಫ್‌: 2020ರಲ್ಲಿ ₹ 6,657 ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾದಿಂದಾಗಿ ಉಂಟಾದ ಆರ್ಥಿಕ ಮಂದಗತಿ ಹಾಗೂ ಡಾಲರ್‌ ಮೌಲ್ಯ ಇಳಿಕೆಯ ಕಾರಣಗಳಿಂದಾಗಿ ಹೂಡಿಕೆದಾರರು ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) 2020ರಲ್ಲಿ ₹ 6,657 ಕೋಟಿ ಹೂಡಿಕೆ ಮಾಡಿದ್ದಾರೆ.

2019ರಲ್ಲಿ ಕೇವಲ ₹ 16 ಕೋಟಿ ಹೂಡಿಕೆ ಆಗಿತ್ತು. ಇದಕ್ಕೂ ಮೊದಲು, ಜಾಗತಿಕ ಆರ್ಥಿಕ ಮಂದಗತಿ ಹಾಗೂ ಷೇರು ಮತ್ತು ಸಾಲಪತ್ರ ಮಾರುಕಟ್ಟೆಗಳ ಚಂಚಲ ವಹಿವಾಟಿನ ಕಾರಣಗಳಿಂದಾಗಿ ಸತತ ಆರು ವರ್ಷಗಳವರೆಗೆ ಬಂಡವಾಳ ಹಿಂತೆಗೆತ ಕಂಡುಬಂದಿತ್ತು. 2020ರ ಮಾರ್ಚ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಮಾತ್ರವೇ ಬಂಡವಾಳ ಹಿಂತೆಗೆತ ಕಂಡುಬಂದಿತ್ತು.

ಚಿನ್ನದ ಇಟಿಎಫ್‌ಗಳ ನಿರ್ವಹಣಾ ಸಂಪತ್ತು 2019ರ ಡಿಸೆಂಬರ್‌ ಅಂತ್ಯದ ವೇಳೆಗೆ ₹ 5,768 ಕೋಟಿಗಳಷ್ಟಿತ್ತು. 2020ರ ಡಿಸೆಂಬರ್‌ ಅಂತ್ಯದ ವೇಳೆಗೆ ಅದು ₹ 14,174 ಕೋಟಿಗೆ ಏರಿಕೆ ಕಂಡಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿಯಿಂದಾಗಿ ಚಿನ್ನದ ಗಳಿಕೆ ಪ್ರಮಾಣ ಹೆಚ್ಚಾಯಿತು. ಹೀಗಾಗಿ ರಿಟೇಲ್‌ ಹೂಡಿಕೆದಾರರು ಸಹ ಇದರತ್ತ ಆಕರ್ಷಿತರಾದರು. ಆದರೆ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ಚಿನ್ನದ ಮೇಲಿನ ಹೂಡಿಕೆ ಕಡಿಮೆ ಆಗಲಿದೆ’ ಎಂದು ಮುದ್ರಾ ಪೋರ್ಟ್‌ಫೋಲಿಯೊ ಮ್ಯಾನೇಜರ್ಸ್‌ನ ಸ್ಥಾಪಕ ನಿಶಾಂತ್‌ ಕೊಹ್ಲಿ ಹೇಳಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕವು ಸಂಪೂರ್ಣವಾಗಿ ಇಲ್ಲವಾಗುವ ಸಾಧ್ಯತೆ ಕಡಿಮೆ ಇರುವುದು ಹಾಗೂ ಅಲ್ಲಲ್ಲಿ ಲಾಕ್‌ಡೌನ್‌ ಜಾರಿಯಲ್ಲಿ ಇರುವುದರಿಂದ 2021ರಲ್ಲಿಯೂ ಚಿನ್ನದ ಮೇಲಿನ ಹೂಡಿಕೆ ಆಸಕ್ತಿ ಮುಂದುವರಿಯಲಿದೆ ಎಂದು ಪ್ರೈಮ್‌ ಇನ್‌ವೆಸ್ಟರ್ಸ್ ಡಾಟ್‌ ಇನ್‌ನ ಸಹ ಸ್ಥಾಪಕಿ ವಿದ್ಯಾ ಬಾಲಾ ತಿಳಿಸಿದ್ದಾರೆ.

ಹೊರಹರಿವು (ಕೋಟಿಗಳಲ್ಲಿ)
2018;
₹ 571
2017; ₹ 730
2016; ₹ 942
2015; ₹ 891
2014; ₹ 1,651
2013; ₹ 1,815

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.