ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 ಹಿನ್ನೆಲೆ: ಚಿನ್ನದ ಆಮದು ಶೇ 94 ಇಳಿಕೆ

Last Updated 19 ಜುಲೈ 2020, 12:48 IST
ಅಕ್ಷರ ಗಾತ್ರ

ನವದೆಹಲಿ: 2020–21ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಆಮದು ಶೇಕಡ 94ರಷ್ಟು ಇಳಿಕೆ ಕಂಡಿದ್ದು, ಮೌಲ್ಯದ ಲೆಕ್ಕದಲ್ಲಿ ಅದು ₹ 5,160 ಕೋಟಿ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಕೋವಿಡ್‌–19ನಿಂದಾಗಿ ಚಿನ್ನದ ಬೇಡಿಕೆ ಇಳಿಕೆ ಕಂಡಿದೆ. ಹೀಗಾಗಿ ಆಮದು ಸಹ ಕಡಿಮೆಯಾಗಿದೆ. 2019–20ರ ಮೊದಲ ತ್ರೈಮಾಸಿಕದಲ್ಲಿ ₹ 86,250 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ಹೇಳಿದೆ. ಬೆಳ್ಳಿ ಆಮದು ಸಹ ಶೇಕಡ 45ರಷ್ಟು ಕಡಿಮೆಯಾಗಿದ್ದು ₹ 4,300 ಕೋಟಿಗಳಷ್ಟಾಗಿದೆ.

ಚಿನ್ನ, ಬೆಳ್ಳಿ ಆಮದಿನಲ್ಲಿ ಆಗಿರುವ ಇಳಿಕೆಯು, ಆಮದು ಮತ್ತು ರಫ್ತು ವಹಿವಾಟಿನ ಮಧ್ಯದ ಅಂತರವಾದ ವ್ಯಾಪಾರ ಕೊರತೆಯು ₹ 3.45 ಲಕ್ಷ ಕೋಟಿಗಳಿಂದ ₹ 68,400 ಕೋಟಿಗಳಿಗೆ ಇಳಿಕೆ ಕಾಣುವಲ್ಲಿ ನೆರವಾಗಿದೆ. ಚಿನ್ನಾಭರಣ ಆಮದು ಶೇಕಡ 72ರಷ್ಟು ಇಳಿಕೆ ಕಂಡಿದ್ದು, ಮೌಲ್ಯದ ಲೆಕ್ಕದಲ್ಲಿ ₹20,250 ಕೋಟಿಗಳಷ್ಟಾಗಿದೆ.

ಚಿನ್ನದ ಆಮದು ಇಳಿಕೆ

ಮಾರ್ಚ್‌;62.6%

ಏಪ್ರಿಲ್‌;99.93

ಮೇ;98.4%

ಜೂನ್‌;77.5%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT