ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅತಿ ದೊಡ್ಡ ಚಿನ್ನ ನಿಕ್ಷೇಪ ಪತ್ತೆ; 3,000 ಟನ್‌, ₹12 ಲಕ್ಷ ಕೋಟಿ ಮೌಲ್ಯ

Last Updated 22 ಫೆಬ್ರುವರಿ 2020, 5:39 IST
ಅಕ್ಷರ ಗಾತ್ರ

ಸೋನ್‌ಭದ್ರಾ (ಉತ್ತರ ಪ್ರದೇಶ): ಸುಮಾರು ₹12 ಲಕ್ಷ ಕೋಟಿ ಮೌಲ್ಯದ 3,000 ಟನ್‌ ಚಿನ್ನದ ನಿಕ್ಷೇಪವನ್ನು ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಯ ಭೂವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಸೋನ್‌ ಪಹಾಡಿ ಮತ್ತು ಹರದಿ ಪ್ರದೇಶಗಳಲ್ಲಿ 3,000 ಟನ್‌ (ಸುಮಾರು 30 ಲಕ್ಷ ಕೆಜಿ) ಚಿನ್ನದ ನಿಕ್ಷೇಪ ಇರುವುದಾಗಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಕೆ.ಕೆ.ರಾಯ್‌ ಶುಕ್ರವಾರ ತಿಳಿಸಿದ್ದಾರೆ.

ಪ್ರಸ್ತುತ ಭಾರತದಲ್ಲಿರುವ ಒಟ್ಟು ಚಿನ್ನ ನಿಕ್ಷೇಪಕ್ಕಿಂತ ಐದು ಪಟ್ಟು ಸೋನ್‌ಭದ್ರಾದಲ್ಲಿದೆ. ಭಾರತೀಯ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಯು 1992–93ರಿಂದ ಚಿನ್ನ ನಿಕ್ಷೇಪ ಪತ್ತೆ ಕಾರ್ಯ ನಡೆಸುತ್ತಿದೆ. ಸೋನ್‌ ಪಹಾಡಿಯಲ್ಲಿ ಅಂದಾಜು 2,943.26 ಟನ್‌ ಹಾಗೂ ಹರದಿ ಬ್ಲಾಕ್‌ನಲ್ಲಿ 646.16 ಕೆಜಿಯಷ್ಟು ಚಿನ್ನ ನಿಕ್ಷೇಪ ಇರುವುದಾಗಿ ಅಂದಾಜಿಸಲಾಗಿದೆ.

ವಿಶ್ವ ಚಿನ್ನ ಮಂಡಳಿ (ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌) ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್‌ ಚಿನ್ನ ನಿಕ್ಷೇಪವಿದೆ. ಪತ್ತೆಯಾಗಿರುವ ನಿಕ್ಷೇಪದ ಪ್ರಮಾಣವು ಐದು ಪಟ್ಟಿದ್ದು, ಅದರ ಅಂದಾಜು ಮೌಲ್ಯ ₹12 ಲಕ್ಷ ಕೋಟಿ. ನಿಕ್ಷೇಪಗಳ ಹರಾಜು ಪ್ರಕ್ರಿಯೆಯು ಇ–ಟೆಂಡರಿಂಗ್‌ ಮೂಲಕ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿನ್ನ ಹೊರತು ಪಡಿಸಿ ಇತರೆ ಖನಿಜ ನಿಕ್ಷೇಪಗಳೂ ಇಲ್ಲಿ ಪತ್ತೆಯಾಗಿವೆ. ನಕ್ಸಲ್‌ ಪೀಡಿತ ಪ್ರದೇಶವಾಗಿ ಹೆಚ್ಚು ಸುದ್ದಿಯಲ್ಲಿರುವ ಸೋನ್‌ಭದ್ರಾ ವಲಯದಲ್ಲಿ ಬ್ರಿಟಿಷರು ಸಹ ಚಿನ್ನ ನಿಕ್ಷೇಪ ಹುಡುಕಾಟ ಪ್ರಕ್ರಿಯೆ ನಡೆಸಿದ್ದರು.

ಉತ್ತರ ಪ್ರದೇಶದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಸೋನ್‌ಭದ್ರಾ, ನಾಲ್ಕು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ದೇಶದ ಏಕೈಕ ಜಿಲ್ಲೆ. ಪಶ್ಚಿಮದಲ್ಲಿ ಮಧ್ಯ ಪ್ರದೇಶ, ಪೂರ್ವದಲ್ಲಿ ಬಿಹಾರ, ದಕ್ಷಿಣದಲ್ಲಿ ಛತ್ತೀಸ್‌ಗಢ ಹಾಗೂ ಆಗ್ನೇಯ ಜಾರ್ಖಂಡ್‌ನೊಂದಿಗೆ ಗಡಿ ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT