ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೋದ್ಯಮಗಳ ಪುನಶ್ಚೇತನ: ಜಾವಡೇಕರ್

Last Updated 16 ಮಾರ್ಚ್ 2021, 10:28 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ವಲಯದ ಸಂಸ್ಥೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವಾಗಲೂ ಪ್ರಯತ್ನ ನಡೆಸುತ್ತದೆ ಎಂದು ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.ಸರ್ಕಾರವು ಭಾರತೀಯ ಜೀವ ವಿಮಾ ನಿಗಮವನ್ನು (ಎಲ್‌ಐಸಿ) ಖಾಸಗೀಕರಣ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ‘ಕೇಂದ್ರೋದ್ಯಮಗಳ ಸಾಮರ್ಥ್ಯ ಸದ್ಬಳಕೆ ಮಾಡಿಕೊಳ್ಳಲು ಯಾವಾಗಲೂ ಪ್ರಯತ್ನಿಸಲಾಗುತ್ತದೆ. ಯಾವ ಉದ್ದಿಮೆಯನ್ನು ಪುನಶ್ಚೇತನ ಮಾಡಲು ಸಾಧ್ಯವೋ ಅದನ್ನು ಪುನಶ್ಚೇತನ ಮಾಡಲಾಗುವುದು’ ಎಂದಿದ್ದಾರೆ.

ಕೆಲವು ಕೇಂದ್ರೋದ್ಯಮಗಳ ಪುನಶ್ಚೇತನ, ವಿಲೀನ ಅಥವಾ ಹೊಸ ರೂಪಕೊಡಲು ಸರ್ಕಾರ ಒಪ್ಪಿಗೆ ನೀಡಿದೆ. ಇವುಗಳಲ್ಲಿ ಕೆಲವೆಂದರೆ ಬ್ರಹ್ಮಪುತ್ರಾ ವ್ಯಾಲಿ ಫರ್ಟಿಲೈಸರ್ಸ್‌ ಕಾರ್ಪೊರೇಷನ್‌ ಲಿಮಿಟೆಡ್, ಹಿಂದುಸ್ತಾನ್‌ ಸ್ಟೀಲ್‌ವರ್ಕ್‌ ಕನ್‌ಸ್ಟ್ರಕ್ಷನ್‌ ಲಿಮಿಟೆಡ್, ರಿಚರ್ಡ್ಸನ್ ಆ್ಯಂಡ್‌ ಕ್ರುಡಾಸ್ ಲಿಮಿಟೆಡ್, ಎನ್‌ಇಪಿಎ ಲಿಮಿಟೆಡ್, ಹೂಗ್ಲಿ ಪ್ರಿಂಟಿಂಗ್‌ ಕಂಪನಿ ಲಿಮಿಟೆಡ್, ಕೊಂಕಣ್‌ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್, ಮಹಾನಗರ್ ಟೆಲಿಕಾಂ ನಿಗಂ ಲಿಮಿಟೆಡ್‌ (ಎಂಟಿಎನ್ಎಲ್) ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT