ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಬುಡ್ಸ್‌ಮನ್ ವ್ಯಾಪ್ತಿಗೆ ವಿಮಾ ದಲ್ಲಾಳಿಗಳು

Last Updated 3 ಮಾರ್ಚ್ 2021, 14:01 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ವಿಮಾ ಓಂಬುಡ್ಸ್‌ಮನ್‌ ನಿಯಮದಲ್ಲಿ ತಿದ್ದುಪಡಿ ತಂದು ವಿಮಾ ದಲ್ಲಾಳಿಗಳನ್ನು ಓಂಬುಡ್ಸ್‌ಮನ್‌ ವ್ಯಾಪ್ತಿಗೆ ಸೇರಿಸಿದೆ. ಅಲ್ಲದೆ, ಪಾಲಿಸಿದಾರರಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಈ ಮೊದಲು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರವೇ ಓಂಬುಡ್ಸ್‌ಮನ್‌ಗೆ ದೂರು ನೀಡಲು ಅವಕಾಶ ಇತ್ತು. ಆದರೆ, ತಿದ್ದುಪಡಿ ನಿಯಮದಲ್ಲಿ ವಿಮೆಗಾರ, ಏಜೆಂಟ್‌, ದಲ್ಲಾಳಿ ಮತ್ತು ಇತರೆ ಮಧ್ಯವರ್ತಿಗಳ ಕಡೆಯಿಂದ ಸೇವೆಯಲ್ಲಿ ಕೊರತೆ ಉಂಟಾದರೂ ದೂರು ನೀಡಲು ಅವಕಾಶ ನೀಡಲಾಗಿದೆ.

2017ರ ವಿಮಾ ಓಂಬುಡ್ಸ್‌ಮನ್‌ ನಿಯಮಗಳಿಗೆ ಸಮಗ್ರ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರವು ಮಾರ್ಚ್ 2ರಂದು ಪ್ರಕಟಿಸಿದೆ. ವಿಮಾ ಸೇವೆಗಳಲ್ಲಿನ ನ್ಯೂನತೆಗಳ ಕುರಿತಾದ ದೂರುಗಳನ್ನು ಸಮಯಕ್ಕೆ ಸರಿಯಾಗಿ, ನಿಷ್ಪಕ್ಷಪಾತ ರೀತಿಯಲ್ಲಿ ಪರಿಹರಿಸಲು ಅನುಕೂಲ ಆಗುವಂತೆವಿಮಾ ಓಂಬುಡ್ಸ್‌ಮನ್‌ ವ್ಯವಸ್ಥೆಯ ಕಾರ್ಯವಿಧಾನದಲ್ಲಿ ಸುಧಾರಣೆ ತರುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ.

ಓಂಬುಡ್ಸ್‌ಮನ್‌ಗೆ ಆನ್‌ಲೈನ್‌ ಮೂಲಕ ದೂರು ನೀಡಲು ಪಾಲಿಸಿದಾರರಿಗೆ ಅವಕಾಶ ಇರಲಿದೆ. ಪಾಲಿಸಿದಾರರು ತಮ್ಮ ದೂರುಗಳ ಸ್ಥಿತಿ ಏನಿದೆ ಎಂಬುದನ್ನು ಆನ್‌ಲೈನ್‌ ಮೂಲಕ ಗಮನಿಸಲು ಅನುಕೂಲ ಆಗುವಂತೆ ದೂರು ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಅಲ್ಲದೆ, ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಯನ್ನು ಸಹ ಓಂಬುಡ್ಸ್‌ಮನ್‌ ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT