ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಐಟಿಆರ್‌ಗೆ ಹೊಸ ಅರ್ಜಿ ನಮೂನೆ

Last Updated 2 ಮೇ 2022, 10:13 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆಯ ಪರಿಷ್ಕೃತ ವಿವರ ಸಲ್ಲಿಸುವ ಹೊಸ ಅರ್ಜಿ ನಮೂನೆ ‘ಐಟಿಆರ್‌–ಯು’ ಕುರಿತು ಆದಾಯ ತೆರಿಗೆ ಇಲಾಖೆಯು ಭಾನುವಾರ ಅಧಿಸೂಚನೆ ಹೊರಡಿಸಿದೆ.

2019–20 ಮತ್ತು 2020–21ನೇ ಹಣಕಾಸು ವರ್ಷಕ್ಕೆ ಪರಿಷ್ಕೃತ ರಿಟರ್ನ್ಸ್‌ ಸಲ್ಲಿಸಲು ಐಟಿಆರ್‌–ಯು ಬಳಸಬಹುದು. ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ನಿಖರವಾದ ಕಾರಣ ಏನು ಎನ್ನುವುದರ ಜೊತೆಗೆ ಎಷ್ಟು ಮೊತ್ತವನ್ನು ತೆರಿಗೆಗೆ ಒಳಪಡಿಸಬಹುದು ಎನ್ನುವುದನ್ನು ತೆರಿಗೆದಾರರು ಈ ಅರ್ಜಿ ನಮೂನೆಯಲ್ಲಿ ತಿಳಿಸಬೇಕು.

ತೆರಿಗೆ ಪಾವತಿದಾರರು, ಆದಾಯ ತೆರಿಗೆ ವಿವರವನ್ನು ಸಲ್ಲಿಸಿದ ಎರಡು ವರ್ಷಗಳ ಒಳಗೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅದರಂತೆ ಈ ಅರ್ಜಿ ನಮೂನೆ ನೀಡಲಾಗಿದೆ. ತೆರಿಗೆ ಪಾವತಿಸುವವರು ಪ್ರತಿ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ ಒಂದು ಬಾರಿ ಮಾತ್ರ ಪರಿಷ್ಕೃತ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT