ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಿಂದ ₹ 5.03 ಲಕ್ಷ ಕೋಟಿ ಸಂಗ್ರಹಿಸಲಿರುವ ಕೇಂದ್ರ: ಹಣಕಾಸು ಸಚಿವಾಲಯ

Last Updated 27 ಸೆಪ್ಟೆಂಬರ್ 2021, 18:10 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಕೇಂದ್ರ ಸರ್ಕಾರವು ಒಟ್ಟು ₹ 5.03 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಸಾಂಕ್ರಾಮಿಕದಿಂದಾಗಿ ಪೆಟ್ಟು ತಿಂದಿರುವ ಅರ್ಥ ವ್ಯವಸ್ಥೆಯ ಪುಶ್ಚೇತನಕ್ಕೆ ಅಗತ್ಯವಿರುವ ವರಮಾನದ ಕೊರತೆಯನ್ನು ನೀಗಿಸಿಕೊಳ್ಳಲು ಈ ಕ್ರಮ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿ) ಕೇಂದ್ರವು ₹ 7.02 ಲಕ್ಷ ಕೋಟಿ ಮೊತ್ತವನ್ನು ಬಾಂಡ್‌ ಮೂಲಕ ಸಂಗ್ರಹಿಸಿದೆ. ‘ಒಟ್ಟು ₹ 12.05 ಲಕ್ಷ ಕೋಟಿ ಮೊತ್ತವನ್ನು ಮಾರುಕಟ್ಟೆಯಿಂದ ಸಂಗ್ರಹಿಸಲಾಗುವುದು ಎಂದು 2021–22ನೇ ಸಾಲಿನ ಬಜೆಟ್‌ನಲ್ಲಿ ಹೇಳಲಾಗಿದೆ. ಈ ಪೈಕಿ ₹ 7.24 ಲಕ್ಷ ಕೋಟಿ ಮೊತ್ತವನ್ನು ಮೊದಲಾರ್ಧದಲ್ಲಿ ಸಾಲವಾಗಿ ಪಡೆಯುವ ಉದ್ದೇಶವಿತ್ತು. ಆದರೆ, ವಾಸ್ತವದಲ್ಲಿ ₹ 7.02 ಲಕ್ಷ ಕೋಟಿ ಮೊತ್ತವನ್ನು ಪಡೆಯಲಾಗಿದೆ’ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT