ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತೆರಿಗೆ: ₹13.63 ಲಕ್ಷ ಕೋಟಿ ಸಂಗ್ರಹ

Last Updated 18 ಡಿಸೆಂಬರ್ 2022, 11:10 IST
ಅಕ್ಷರ ಗಾತ್ರ

ನವದೆಹಲಿ: ನೇರ ತೆರಿಗೆಯ ಸರಾಸರಿ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಶೇ 26ರಷ್ಟು ಹೆಚ್ಚಾಗಿದ್ದು ₹13.63 ಲಕ್ಷ ಕೋಟಿಗೆ ತಲುಪಿದೆ.

ಟಿಡಿಎಸ್‌ ಮತ್ತು ಕಾರ್ಪೊರೇಟ್‌ ಮುಂಗಡ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಿರುವುದೇ ಈ ಪ್ರಮಾಣದ ಬೆಳವಣಿಗೆಗೆ ಕಾರಣ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ. ಡಿಸೆಂಬರ್‌ 17ರವರೆಗೆ ₹2.28 ಲಕ್ಷ ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ.

ತೆರಿಗೆ ಮರುಪಾವತಿ ನೀಡಿದ ಬಳಿಕ ನಿವ್ವಳ ತೆರಿಗೆ ಸಂಗ್ರಹ ₹11.35 ಲಕ್ಷ ಕೋಟಿಗೆ ತಲುಪಿದ್ದು, ಬಜೆಟ್‌ ಅಂದಾಜಿನ ಶೇ 80ರಷ್ಟು ಆಗಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನೇರ ತೆರಿಗೆ ಸಂಗ್ರಹವು ₹14.20 ಲಕ್ಷ ಕೋಟಿ ಆಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿದೆ.

ಒಟ್ಟು ತೆರಿಗೆ ಸಂಗ್ರಹದಲ್ಲಿ ಮುಂಗಡ ತೆರಿಗೆ ಸಂಗ್ರಹ ₹5.21 ಲಕ್ಷ ಕೋಟಿ, ಟಿಡಿಎಸ್‌ ₹6.44 ಲಕ್ಷ ಕೋಟಿ ಸೇರಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಮರುಪಾವತಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲಾಗುತ್ತಿದೆ. ದೃಢೀಕರಿಸಿರುವ ಐಟಿಆರ್‌ಗಳಲ್ಲಿ ಡಿಸೆಂಬರ್‌ 17ರವರೆಗೆ ಶೇ 96.5ರಷ್ಟು ಮರುಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT