ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1 ರಿಂದ ಬೆಲೆ ಏರಿಕೆ: ಹೀರೊ ಮೊಟೊಕಾರ್ಪ್‌

Last Updated 23 ಜೂನ್ 2022, 13:13 IST
ಅಕ್ಷರ ಗಾತ್ರ

ನವದೆಹಲಿ: ಹೀರೊ ಮೊಟೊಕಾರ್ಪ್‌ ಕಂಪನಿಯು ಜುಲೈ 1ರಿಂದ ಜಾರಿಗೆ ಬರುವಂತೆ ತನ್ನ ಎಲ್ಲ ಬೈಕ್‌ ಮತ್ತು ಸ್ಕೂಟರ್‌ಗಳ ಬೆಲೆಯನ್ನು ₹ 3 ಸಾವಿರದವರೆಗೆ ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.

ನಿರ್ದಿಷ್ಟ ಮಾದರಿ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ಬೆಲೆಯು ಹೆಚ್ಚಾಗಲಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಸರಕುಗಳ ದರ ಸೇರಿದಂತೆ ಒಟ್ಟಾರೆ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಅದನ್ನು ಭಾಗಶಃ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿ ತಿಳಿಸಿದೆ.

ಕಂಪನಿಯು ₹ 51,450ರಿಂದ ₹ 1.32 ಲಕ್ಷದವರೆಗಿನ ಬೆಲೆಯ (ಎಕ್ಸ್‌ ಷೋರೂಂ) ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT