ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ ಬೆಲೆ ಶೇ 10–15ರವರೆಗೆ ಹೆಚ್ಚಳ ಸಾಧ್ಯತೆ: ಕ್ರೆಡಾಯ್

Last Updated 16 ನವೆಂಬರ್ 2021, 14:18 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಸಿಮೆಂಟ್‌ ಮತ್ತು ಕಬ್ಬಿಣದ ಬೆಲೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿರುವುದಕ್ಕೆ ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟವು (ಕ್ರೆಡಾಯ್‌) ಆತಂಕ ವ್ಯಕ್ತಪಡಿಸಿದ್ದು, ನಿರ್ಮಾಣಕ್ಕೆ ಸಂಬಂಧಿಸಿದ ಕಚ್ಚಾ ಸಾಮಗ್ರಿಗಳ ಬೆಲೆಯು ನಿಯಂತ್ರಣಕ್ಕೆ ಬರದೇ ಇದ್ದರೆ ಮನೆಗಳ ಬೆಲೆಯು ಶೇಕಡ 10–15ರವರೆಗೆ ಏರಿಕೆ ಆಗಬಹುದು ಎಂದು ಹೇಳಿದೆ.

ಬೆಲೆ ಏರಿಕೆ ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ನಿರ್ಮಾಣ ಕಚ್ಚಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ. 2020ರ ಜನವರಿಯಿಂದ ನಿರ್ಮಾಣ ಕ್ಷೇತ್ರದ ಕಚ್ಚಾ ಸಾಮಗ್ರಿಗಳ ಬೆಲೆಯು ನಿರಂತರವಾಗಿ ಹೆಚ್ಚಾಗುತ್ತ ಇದೆ ಎಂದು ಅದು ಹೇಳಿದೆ. 13 ಸಾವಿರಕ್ಕೂ ಹೆಚ್ಚಿನ ನಿರ್ಮಾಣಗಾರರುಒಕ್ಕೂಟದ ಸದಸ್ಯರಾಗಿದ್ದಾರೆ.

ಲಾಕ್‌ಡೌನ್‌ ಮತ್ತು ಕಾರ್ಮಿಕರ ಕೊರತೆಯ ಕಾರಣಗಳಿಂದಾಗಿ ನಿರ್ಮಾಣ ಚಟುವಟಿಕೆಗಳು ಪೂರ್ಣಗೊಳ್ಳುವುದು ವಿಳಂಬ ಆಗಿದೆ. ಇದರ ಪರಿಣಾಮವಾಗಿ ನಿರ್ಮಾಣ ವೆಚ್ಚವು ಕಳೆದ 18 ತಿಂಗಳಲ್ಲಿ ಶೇ 10ರಿಂದ ಶೇ 15ರಷ್ಟು ಏರಿಕೆ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಒಂದು ವರ್ಷದಲ್ಲಿ ಕಚ್ಚಾ ಸಾಮಗ್ರಿಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಸದ್ಯದ ಮಟ್ಟಿಗೆ ಬೆಲೆಯಲ್ಲಿ ಇಳಿಕೆ ಆಗುವ ಅಥವಾ ಬೆಲೆಯು ಒಂದು ಹಂತಕ್ಕೆ ಸ್ಥಿರವಾಗುವ ಯಾವುದೇ ಸೂಚನೆ ಕಂಡುಬರುತ್ತಿಲ್ಲ ಎಂದು ಕ್ರೆಡಾಯ್‌ನ ಅಧ್ಯಕ್ಷ ಹರ್ಷವರ್ಧನ್‌ ಪಠೋಡಿಯಾ ಹೇಳಿದ್ದಾರೆ. ನಿರ್ಮಾಣಗಾರರು ಹೆಚ್ಚುವರಿ ವೆಚ್ಚವನ್ನು ಹೊರುವುದು ಕಷ್ಟವಾಗಲಿದ್ದು, ಅದನ್ನು ಮನೆ ಖರೀದಿಸುವವರ ಮೇಲೆ ವರ್ಗಾಯಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT