ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಪಿಸಿಎಲ್‌ ನಷ್ಟ ₹ 10,196 ಕೋಟಿ

Last Updated 6 ಆಗಸ್ಟ್ 2022, 11:16 IST
ಅಕ್ಷರ ಗಾತ್ರ

ನವದೆಹಲಿ: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 10,196 ಕೋಟಿ ನಿವ್ವಳ ನಷ್ಟ ಕಂಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವನ್ನು ತಡೆಹಿಡಿದ ಕಾರಣಕ್ಕಾಗಿ ನಷ್ಟ ಆಗಿದೆ ಎಂದು ಕಂಪನಿಯು ಹೇಳಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1,795 ಕೋಟಿ ನಿವ್ವಳ ಲಾಭ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯು ಇದೇ ಮೊದಲ ಬಾರಿಗೆ ತ್ರೈಮಾಸಿಕವೊಂದರಲ್ಲಿ ಈ ಪ್ರಮಾಣದ ನಷ್ಟ ಅನುಭವಿಸಿದೆ. ಉತ್ಪನ್ನಗಳ ಮಾರಾಟದಿಂದ ಬರುವ ವರಮಾನವು ₹ 1.21 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 77,308 ಕೋಟಿ ಇತ್ತು.

ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರಕ್ಕೆ ನೆರವಾಗುವ ಉದ್ದೇಶದಿಂದ ವೆಚ್ಚದಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಅನುಗುಣವಾಗಿ ಎಚ್‌ಪಿಸಿಎಲ್‌, ಐಒಸಿ, ಬಿಪಿಸಿಎಲ್‌ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಬೆಲೆಯನ್ನು ಏಪ್ರಿಲ್‌–ಜೂನ್‌ ಅವಧಿಯಲ್ಲಿ ಹೆಚ್ಚಿಸಿರಲಿಲ್ಲ. ಇದು ಕಂಪನಿಗಳಿಗೆ ನಷ್ಟವಾಗಲು ಕಾರಣವಾಗಿದೆ. ಐಒಸಿ ಸಹ ಜೂನ್ ತ್ರೈಮಾಸಿಕದಲ್ಲಿ ₹ 1,992 ಕೋಟಿ ನಿವ್ವಳ ನಷ್ಟ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT