ಗುರುವಾರ , ಮೇ 26, 2022
23 °C

ಸೆಪ್ಟೆಂಬರ್‌ ತ್ರೈಮಾಸಿಕ: ಹಿಂದುಸ್ತಾನ್ ಯೂನಿಲಿವರ್ ಲಾಭ ಶೇ 10.7ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಕಂಪನಿ ಹಿಂದುಸ್ತಾನ್ ಯೂನಿಲಿವರ್‌, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿನ ನಿವ್ವಳ ಲಾಭದಲ್ಲಿ ಶೇಕಡ 10.69ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯು ₹ 2,185 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 1,974 ಕೋಟಿ ಲಾಭ ಕಂಡಿತ್ತು. ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆದಾಯದಲ್ಲಿ ಶೇ 11.31ರಷ್ಟು ಹೆಚ್ಚಳ ಆಗಿದ್ದು, ₹ 12,812 ಕೋಟಿಗೆ ತಲುಪಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು