ಶನಿವಾರ, ಜೂನ್ 25, 2022
24 °C

ಮುಂಬೈನ ಹಯಾತ್‌ ರೀಜೆನ್ಸಿ ಕಾರ್ಯಾಚರಣೆ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ಏಷ್ಯನ್‌ ಹೋಟೆಲ್ಸ್‌ನ ಎಸ್ಕ್ರೊ ಖಾತೆಯಿಂದ ಹಣ ಪಾವತಿಸಲು ಯೆಸ್‌ ಬ್ಯಾಂಕ್‌ ನಿರ್ಬಂಧ

ನವದೆಹಲಿ: ಏಷ್ಯನ್‌ ಹೋಟೆಲ್ಸ್‌ (ವೆಸ್ಟ್‌) ಕಂಪನಿಯು ಮುಂಬೈನಲ್ಲಿನ ತನ್ನ ಹಯಾತ್‌ ರೀಜೆನ್ಸಿ ಹೋಟೆಲ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಸಾಲ ಮರುಪಾವತಿಸದೇ ಇರುವ ಕಾರಣಕ್ಕಾಗಿ ಏಷ್ಯನ್‌ ಹೋಟೆಲ್ಸ್‌ನ ಎಸ್ಕ್ರೊ ಖಾತೆಯಿಂದ ಹಣ ಪಾವತಿಸಲು ಯೆಸ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ. ಹೀಗಾಗಿ ಹೋಟೆಲ್‌ನ ಕಾರ್ಯಾಚರಣೆ ನಿಲ್ಲಿಸಿರುವುದಾಗಿ ಅದು ಹೇಳಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಯೆಸ್‌ ಬ್ಯಾಂಕ್‌ಗೆ 2021ರ ಏಪ್ರಿಲ್‌ 28ರಂದು ಸಾಲ ಮರುಪಾವತಿಸಲು ಆಗಿಲ್ಲ ಎಂದು ಏಷ್ಯನ್‌ ಹೋಟೆಲ್ಸ್‌ ಸಮೂಹವು ಷೇರುಪೇಟೆಗೆ ಮಾಹಿತಿ ನೀಡಿದೆ. ಆ ದಿನದಿಂದ ಎಸ್ಕ್ರೊ ಖಾತೆಯ ಮೂಲಕ ಯಾವುದೇ ವಹಿವಾಟು ನಡೆಸದಂತೆ ಯೆಸ್‌ ಬ್ಯಾಂಕ್‌ ನಿರ್ಬಂಧಿಸಿದೆ.

ಮೇ 28ರಂದು ಷೇರುಪೇಟೆಗೆ ನೀಡಿರುವ ಮಾಹಿತಿಯ ಪ್ರಕಾರ ಅದು ₹ 4.32 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು