ಸೋಮವಾರ, ಡಿಸೆಂಬರ್ 5, 2022
18 °C

ಹುಂಡೈನಿಂದ ಬ್ಯಾಟರಿ ಎಲೆಕ್ಟ್ರಿಕ್‌ ಪ್ಲಾಟ್‌ಫಾರಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಅಯೋನಿಕ್‌ 5’ ಮಾದರಿಯ ಮೂಲಕ ದೇಶದಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳ ಪ್ಲಾಟ್‌ಫಾರಂ ಪರಿಚಯಿಸುವುದಾಗಿ ಹುಂಡೈ ಮೋಟರ್‌ ಇಂಡಿಯಾ ಕಂಪನಿ ಹೇಳಿದೆ.

ಎಲೆಕ್ಟ್ರಿಕ್‌ ಗ್ಲೋಬಲ್‌ ಮಾಡ್ಯುಲರ್‌ ಪ್ಲಾಟ್‌ಫಾರಂ (ಇ–ಜಿಎಂಪಿ) ಆಧರಿತ ಕಂಪನಿಯ ಮೊದಲ ಮಾದರಿ ‘ಅಯೋನಿಕ್‌ 5’ ಆಗಿದ್ದು, 2023ರ ಜನರಿಯಲ್ಲಿ ನಡೆಯಲಿರುವ ವಾಹನ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.

ಭಾರತದಲ್ಲಿ ಹೊಸ ಕಾಲದ ಗ್ರಾಹಕರಿಗೆ ಹೊಸ ವರ್ಗದ ವಿದ್ಯುತ್ ವಾಹನಗಳನ್ನು ನೀಡಲು ‘ಇ–ಜಿಎಂಪಿ’ ಕಾರಣವಾಗಲಿದೆ ಎಂದು ಹುಂಡೈ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನ್ಸು ಕಿಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2028ರ ವೇಳೆಗೆ ಭಾರತದಲ್ಲಿ ಆರು ವಿದ್ಯುತ್ ವಾಹನ ಮಾದರಿಗಳನ್ನು ಪರಿಚಯಿಸಲು ₹ 4 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಕಳೆದ ವರ್ಷ ಘೋಷಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು