ಶುಕ್ರವಾರ, ಡಿಸೆಂಬರ್ 4, 2020
22 °C

ನಗದು ಜಮಾ ಮಾಡಲೂ ಐಸಿಐಸಿಐ ಶುಲ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗದು ಸ್ವೀಕರಿಸುವ ಯಂತ್ರದ ಮೂಲಕ ಹಣ ಜಮಾ ಮಾಡುವುದಕ್ಕೆ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ಆರಂಭಿಸಿದೆ. ಬ್ಯಾಂಕ್‌ಗೆ ರಜೆ ಇದ್ದ ದಿನ ಅಥವಾ ಬ್ಯಾಂಕಿನ ಕೆಲಸದ ಅವಧಿಯ ನಂತರ ಮಾಡುವ ಜಮಾಕ್ಕೆ ₹ 50 ಶುಲ್ಕವನ್ನು ಐಸಿಐಸಿಐ ವಿಧಿಸುತ್ತಿದೆ.

ಈ ನಿಯಮವು ನವೆಂಬರ್ 1ರಿಂದ ಜಾರಿಗೆ ಬಂದಿದೆ. ಸಂಜೆ ಆರು ಗಂಟೆಯ ನಂತರ, ಬೆಳಿಗ್ಗೆ 8 ಗಂಟೆಗೆ ಮೊದಲು ನಗದು ಜಮಾ ಮಾಡುವುದಕ್ಕೆ ಶುಲ್ಕ ಅನ್ವಯವಾಗುತ್ತದೆ. ಪ್ರತಿ ತಿಂಗಳಲ್ಲಿ ಜಮಾ ಮಾಡುವ ಮೊತ್ತವು ₹ 10 ಸಾವಿರ ಮೀರದಿದ್ದರೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಶುಲ್ಕವು ಹಿರಿಯ ನಾಗರಿಕರಿಗೆ, ಬೇಸಿಕ್‌ ಉಳಿತಾಯ ಖಾತೆದಾರರಿಗೆ, ಜನಧನ ಖಾತೆಗಳಿಗೆ, ಅಂಗವಿಕಲರು ಹೊಂದಿರುವ ಖಾತೆಗಳಿಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿರ್ಧಾರ ಹಿಂಪಡೆದ ಬಿಒಬಿ: ಖಾತೆಯಲ್ಲಿ ನಗದು ಇರಿಸಲು ಮತ್ತು ಖಾತೆಯಿಂದ ನಗದು ತೆಗೆಯುವುದಕ್ಕೆ ಸೇವಾ ಶುಲ್ಕ ವಿಧಿಸುವ ತನ್ನ ನಿರ್ಧಾರದಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಹಿಂದೆ ಸರಿದಿದೆ. ಕೋವಿಡ್‌–19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಉಂಟುಮಾಡಿರುವ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ತಕ್ಷಣದಿಂದ ಜಾರಿಗೆ ಬರುವಂತೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅದು ಮಂಗಳವಾರ ಹೇಳಿದೆ. ನವೆಂಬರ್‌ 1ರಿಂದ ಜಾರಿಗೆ ಬಂದಿದ್ದ ನಿಯಮವನ್ನು ಕೈಬಿಟ್ಟಿರುವುದರಿಂದ ಹಿಂದೆ ಇದ್ದ ನಿಯಮಗಳೇ ಮುಂದುವರಿಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು