ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಡಿಪಿ ಶೇ 6.7ರಷ್ಟು ಪ್ರಗತಿ: ಐಸಿಆರ್‌ಎ

Published 21 ಮೇ 2024, 14:07 IST
Last Updated 21 ಮೇ 2024, 14:07 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಜಿಡಿಪಿ ಬೆಳವಣಿಗೆಯು 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 6.7ರಷ್ಟು ಪ್ರಗತಿ ಕಾಣಲಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.

ದೇಶದ ಜಿಡಿಪಿಯು ಜೂನ್‌ ತ್ರೈಮಾಸಿಕದಲ್ಲಿ ಶೇ 8.2ರಷ್ಟು, ಸೆಪ್ಟೆಂಬರ್‌ನಲ್ಲಿ ಶೇ 8.1ರಷ್ಟು ಹಾಗೂ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 8.4ರಷ್ಟು ದಾಖಲಾಗಿತ್ತು. 2023–24ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಶೇ 7.8ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ.

‘ಕೆಲವು ಕೈಗಾರಿಕಾ ವಲಯಗಳಲ್ಲಿ ಸರಕುಗಳ ಬೆಲೆ ಇಳಿಕೆಯಾಗಿದ್ದು, ಲಾಭದ ಮೇಲೆ ಪರಿಣಾಮ ಬೀರಿದೆ. ಇದು ನಾಲ್ಕನೇ ತ್ರೈಮಾಸಿಕದ ಆಂತರಿಕ ಉತ್ಪನ್ನದಲ್ಲಿನ ಒಟ್ಟು ಮೌಲ್ಯ ವರ್ಧನೆಯ (ಜಿವಿಎ) ವೇಗವನ್ನು ಮಂದಗೊಳಿಸಿದೆ’ ಎಂದು ಐಸಿಆರ್‌ಎ  ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

2022–23ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 6.1ರಷ್ಟು ಬೆಳವಣಿಗೆ ದಾಖಲಿಸಿತ್ತು. ಪೂರ್ಣ ಆರ್ಥಿಕ ವರ್ಷದಲ್ಲಿ ಶೇ 7ರಷ್ಟು ಪ್ರಗತಿ ಕಂಡಿತ್ತು.

2023–24ನೇ ಆರ್ಥಿಕ ವರ್ಷದ ಜಿಡಿಪಿ ವರದಿಯು ಇದೇ 31ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT