ಭಾನುವಾರ, ಏಪ್ರಿಲ್ 18, 2021
25 °C

ಭಾರತದ ಬೆಳವಣಿಗೆ ಈ ವರ್ಷ ಶೇ 12.5ರಷ್ಟು: ಐಎಂಎಫ್‌

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: 2021ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 12.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ. ಇದು ಚೀನಾ ಸಾಧಿಸಲಿರುವ ಬೆಳವಣಿಗೆ ಪ್ರಮಾಣಕ್ಕಿಂತ ಹೆಚ್ಚು.

2022ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇ 6.9ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಸಂಸ್ಥೆಯು ತನ್ನ ವಾರ್ಷಿಕ ‘ವಿಶ್ವ ಆರ್ಥಿಕ ಮುನ್ನೋಟ’ ವರದಿಯಲ್ಲಿ ಹೇಳಿದೆ. 2021ರಲ್ಲಿ ಚೀನಾದ ಬೆಳವಣಿಗೆ ಶೇ 8.6ರಷ್ಟು, 2022ರಲ್ಲಿ ಶೇ 5.6ರಷ್ಟು ಇರಲಿದೆ ಎಂದು ಅದು ಅಂದಾಜಿಸಿದೆ.

‘ಜಾಗತಿಕ ಅರ್ಥ ವ್ಯವಸ್ಥೆಯು 2021ರಲ್ಲಿ ಶೇ 6ರಷ್ಟು ಹಾಗೂ 2022ರಲ್ಲಿ ಶೇ 4.4ರಷ್ಟು ಬೆಳವಣಿಗೆ ಕಾಣಲಿದೆ ಎಂಬುದು ನಮ್ಮ ಅಂದಾಜು’ ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

‘ಸಾಂಕ್ರಾಮಿಕವನ್ನು ನಾವು ಇನ್ನೂ ಸೋಲಿಸಿ ಆಗಿಲ್ಲ. ಕೋವಿಡ್ ಪ್ರಕರಣಗಳು ಹಲವು ದೇಶಗಳಲ್ಲಿ ಹೆಚ್ಚಾಗುತ್ತಿವೆ. ಈಗಿನ ಸಂದರ್ಭದಲ್ಲಿ ಆರೋಗ್ಯ ಬಿಕ್ಕಟ್ಟಿನಿಂದ ಪಾರಾಗುವುದಕ್ಕೆ ಆದ್ಯತೆ ಇರಬೇಕು. ಆರೋಗ್ಯ ಸೇವೆಗಳ ಮೇಲೆ, ಲಸಿಕೆ ನೀಡುವುದರ ಮೇಲೆ, ಚಿಕಿತ್ಸೆಗೆ ಹಾಗೂ ಆರೋಗ್ಯ ಸೇವಾ ಮೂಲ ಸೌಕರ್ಯದ ಮೇಲೆ ಹೂಡಿಕೆ ಹೆಚ್ಚಾಗಬೇಕು’ ಎಂದು ಗೀತಾ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು