ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು ಅವಲಂಬನೆ ತಗ್ಗಿಸಲು ಕಾರ್ಯಪಡೆ

Last Updated 4 ಸೆಪ್ಟೆಂಬರ್ 2019, 6:53 IST
ಅಕ್ಷರ ಗಾತ್ರ

ನವದೆಹಲಿ: ಆಮದು ಮೇಲಿನ ಅವಲಂಬನೆ ತಗ್ಗಿಸಲು ಉನ್ನತ ಮಟ್ಟದ ಕಾರ್ಯಪಡೆಯೊಂದನ್ನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸಂಪುಟ ಕಾರ್ಯದರ್ಶಿಪಿ.ಕೆ. ಸಿನ್ಹಾ ಅವರು ಈ ಕಾರ್ಯಪಡೆಯ ಅಧ್ಯಕ್ಷರಾಗಿರಲಿದ್ದಾರೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ, ಯಾವ ಉತ್ಪನ್ನಗಳ ಆಮದು ತಗ್ಗಿಸುವ ಮೂಲಕ ದೇಶದಲ್ಲಿಯೇ ಅವುಗಳ ತಯಾರಿಕೆ ಸಾಧ್ಯವಿದೆ ಎನ್ನುವ ಬಗ್ಗೆ ಈ ಸಮಿತಿಯು ಸಲಹೆ ನೀಡಲಿದೆ.

ಚೀನಾದಿಂದಔಷಧ ತಯಾರಿಕೆಗೆ ಚೀನಾದಿಂದ ಸದ್ಯ ಶೇ 60 ರಷ್ಟು ಕಚ್ಚಾ ಪದಾರ್ಥಗಳು ಆಮದಾಗುತ್ತಿರುವ ಬಗ್ಗೆ ತಜ್ಞರುಆತಂಕ ವ್ಯಕ್ತಪಡಿಸಿದ್ದಾರೆ.

2017–18ರಲ್ಲಿ ಆಮದು ಶೇ 20 ರಷ್ಟು ಹೆಚ್ಚಾಗಿದ್ದು, ₹ 31.28 ಲಕ್ಷ ಕೋಟಿಗೆ ತಲುಪಿದೆ.

* ಅತಿ ಹೆಚ್ಚು ಆಮದಾಗುತ್ತಿರುವ ವಲಯಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಮಗ್ರ ಕೈಗಾರಿಕಾ ನೀತಿಯಿಂದ ದೇಶಿ ತಯಾರಿಕೆ ಹೆಚ್ಚಿಸಲು ನೆರವಾಗಲಿದೆ
–ವಿಶ್ವಜಿತ್‌ ಧಾರ್‌, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT