ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ: ಟೆಲಿಮೆಡಿಸಿನ್‌ ವೆಚ್ಚ ಪರಿಗಣನೆ

Last Updated 11 ಜೂನ್ 2020, 16:07 IST
ಅಕ್ಷರ ಗಾತ್ರ

ನವದೆಹಲಿ: ಟೆಲಿಮೆಡಿಸಿನ್‌ಗೆ ಮಾಡಿದ ವೆಚ್ಚವನ್ನು ವಿಮೆ ಪರಿಹಾರ ವಿತರಿಸುವಾಗ ಪರಿಗಣಿಸಬೇಕು ಎಂದು ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.

ನೋಂದಾಯಿತ ವೈದ್ಯರು ಟೆಲಿಮೆಡಿಸಿನ್‌ ನೀಡಲು ಭಾರತೀಯ ವೈದ್ಯಕೀಯ ಮಂಡಳಿಯು (ಎಂಸಿಐ) ಮಾರ್ಚ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತ್ತು. ಚಿಕತ್ಸೆ ಪಡೆಯಲು ಟೆಲಿಮೆಡಿಸಿನ್‌ಗೆ ಮಾಡಿದ ವೆಚ್ಚವನ್ನು ವಿಮೆ ಪರಿಹಾರ ನೀಡುವಾಗ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸುತ್ತೋಲೆಯಲ್ಲಿ ತಿಳಿಸಿದೆ.

ಟೆಲಿಮೆಡಿಸಿನ್‌ ಬಳಕೆಯಿಂದಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಸಾಧ್ಯವಾಗುವುದು.ಆರೋಗ್ಯ ಕಾರ್ಯಕರ್ತರು ಮತ್ತು ಕಾಯಿಲೆ ಪೀಡಿತರಿಗೂ ಇದು ಸುರಕ್ಷತೆ ಒದಗಿಸುತ್ತದೆ. ಭೌಗೋಲಿಕ ಅಂತರ ಮತ್ತು ಸೀಮಿತ ಸಂಪನ್ಮೂಲಗಳ ಕಾರಣಕ್ಕೆ ರೋಗಿಗಳಿಗೆ ವ್ಯಕ್ತಿಗತವಾಗಿ ಆರೋಗ್ಯ ಸೇವೆ ಒದಗಿಸುವುದು ಸವಾಲಿನಿಂದ ಕೂಡಿದೆ. ಟೆಲಿಮೆಡಿಸಿನ್‌ನಿಂದಗ್ರಾಮೀಣ ಪ್ರದೇಶದ ಕಾಯಿಲೆ ಪೀಡಿತರು ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯಲು ದೂರ ಪ್ರಯಾಣ ಮಾಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT