ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ, ತಮಿಳುನಾಡು ಸೇರಿ ನಾಲ್ಕು ರಾಜ್ಯಗಳ ತಲಾ ಆದಾಯ ಹೆಚ್ಚಳ

Published 27 ಮಾರ್ಚ್ 2024, 16:27 IST
Last Updated 27 ಮಾರ್ಚ್ 2024, 16:27 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಒಂದು ದಶಕದ ಅವಧಿಯಲ್ಲಿ ಗುಜರಾತ್‌, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯದ ತಲಾ ಆದಾಯವು ಹೆಚ್ಚಳವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಸಂಶೋಧನಾ ವರದಿ ಹೇಳಿದೆ.

ಈ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳ, ಬಿಹಾರ ಹಾಗೂ ಜಾರ್ಖಂಡ್‌ ರಾಜ್ಯದ ತಲಾ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ ಎಂದು ತಿಳಿಸಿದೆ.

ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ ಪೂರ್ವ ಹಾಗೂ ಉತ್ತರ ಭಾಗದಲ್ಲಿರುವ ರಾಜ್ಯಗಳ ತಲಾ ಆದಾಯದಲ್ಲಿ ಏರಿಕೆಯಾಗಿಲ್ಲ. ಇದರಿಂದ ರಾಜ್ಯಗಳ ನಡುವೆ ಅಸಮಾನತೆಯ ಬಿರುಕು ದೊಡ್ಡದಾಗುತ್ತಿದೆ ಎಂದು ಹೇಳಿದೆ.

2011–12ರಲ್ಲಿ ಗುಜರಾತ್‌ನ ತಲಾ ಆದಾಯವು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ 1.4 ಪಟ್ಟು ಹೆಚ್ಚು ಇತ್ತು. 2022–23ರಲ್ಲಿ 1.8 ಪಟ್ಟಿನಷ್ಟು ಇದೆ. ಕರ್ನಾಟಕದ ತಲಾ ಆದಾಯವು 1.7‍ ಪಟ್ಟು ಹಾಗೂ ತೆಲಂಗಾಣದ ತಲಾ ಆದಾಯವು 1.6 ಪಟ್ಟಿನಷ್ಟು ಇದೆ. ಆದರೆ ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರದ ತಲಾ ಆದಾಯವು ಇಳಿಕೆಯಾಗಿದ್ದು, ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ ಎಂದು ತಿಳಿಸಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ಅನ್ವಯ 2022–23ರಲ್ಲಿ ದೇಶದ ತಲಾ ಆದಾಯವು ₹1,16,226 ಇದೆ. ಸದ್ಯ ಗುಜರಾತ್‌ನ ತಲಾ ಆದಾಯವು ₹2,09,188 ಇದ್ದರೆ, ಬಿಹಾರದ ತಲಾ ಆದಾಯವು ₹34,864 ಇದೆ ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT