ಅಧಿಕ ಮಾಸ: ಚಿನ್ನಕ್ಕಿಲ್ಲ ಬೇಡಿಕೆ

7
ಏಪ್ರಿಲ್‌–ಜೂನ್‌ ಅವಧಿಯ ವಿಶ್ವ ಚಿನ್ನ ಸಮಿತಿ ವರದಿ

ಅಧಿಕ ಮಾಸ: ಚಿನ್ನಕ್ಕಿಲ್ಲ ಬೇಡಿಕೆ

Published:
Updated:

ಮುಂಬೈ: ಸದ್ಯದ ಮಟ್ಟಿಗೆ, ಭಾರತದಲ್ಲಿ ಚಿನ್ನ ಬೇಡಿಕೆ ಕಳೆದುಕೊಳ್ಳುತ್ತಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ತಿಳಿಸಿದೆ.

2018ರ ಕ್ಯಾಲೆಂಡರ್‌ ವರ್ಷದ ಏಪ್ರಿಲ್‌–ಜೂನ್ ಅವಧಿಯಲ್ಲಿ ಬೇಡಿಕೆಯು ಶೇ 8 ರಷ್ಟು ಕಡಿಮೆಯಾಗಿದೆ.

ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಮತ್ತು ಚಿನ್ನಾಭರಣಗಳ ಖರೀದಿ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಚಿನ್ನದ ಬೇಡಿಕೆ ತಗ್ಗುತ್ತಿದೆ.

ಭಾರತದಲ್ಲಿ ಚಿನ್ನದ ಮರುಬಳಕೆ ಪ್ರಮಾಣವು 29.6 ಟನ್‌ಗಳಿಂದ 32 ಟನ್‌ಗಳಿಗೆ (ಶೇ 8ರಷ್ಟು) ಏರಿಕೆಯಾಗಿದೆ.

‘ಜಿಎಸ್‌ಟಿ ಜಾರಿಗೆ ಬರಲಿದೆ ಎನ್ನುವ ಕಾರಣಕ್ಕಾಗಿ 2017ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಿದರು. 2018ರ ಆರಂಭದಲ್ಲಿ ಅಕ್ಷಯ ತೃತೀಯದಲ್ಲಿ ಮಾರಾಟ ಹೆಚ್ಚಾಗಿತ್ತು. ಆದರೆ ‘ಅಧಿಕ ಮಾಸ’ ಬಂದ ಬಳಿಕ ಜನರು ಖರೀದಿಯಿಂದ ಹಿಂದೆ ಸರಿದರು. ಇದರಿಂದ ಬೇಡಿಕೆ ತಗ್ಗಿದೆಯಷ್ಟೆ’ ಎಂದು ಡಬ್ಲ್ಯುಜಿಸಿನ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ತಿಳಿಸಿದ್ದಾರೆ.

‘ಉತ್ತಮ ಮುಂಗಾರು, ರೈತರ ಆದಾಯ ದುಪ್ಪಟ್ಟುಗೊಳಿಸಲು ಸರ್ಕಾರದ ಪ್ರಯತ್ನದ ಫಲವಾಗಿ 2018ರ ದ್ವಿತೀಯಾರ್ಧದಲ್ಲಿ ಚಿನ್ನ ಮತ್ತೆ ಬೇಡಿಕೆ ಕಂಡುಕೊಳ್ಳಲಿದೆ.

‘ನಾಲ್ಕನೇ ತ್ರೈಮಾಸಿಕದಲ್ಲಿ ದೀಪಾವಳಿ ಮತ್ತು ಮದುವೆ ಸಮಾರಂಭಗಳು ಇರುವುದರಿಂದ ಖರೀದಿ ಹೆಚ್ಚಾಗಲಿದೆ. ಆದರೆ ಚಿನ್ನದ ಬೆಲೆ, ಕರೆನ್ಸಿ ಮೌಲ್ಯ ಹಾಗೂ ಸರ್ಕಾರದ ನೀತಿಗಳ ಆಧಾರದ ಮೇಲೆ ಎಷ್ಟು ಪ್ರಮಾಣದಲ್ಲಿ ಬೇಡಿಕೆ ಬರಲಿದೆ ಎನ್ನುವುದು ನಿರ್ಧಾರವಾಗಲಿದೆ’ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿಯೂ ಇಳಿಕೆ

ಜಾಗತಿಕ ಮಟ್ಟದಲ್ಲಿಯೂ ಚಿನ್ನದ ಬೇಡಿಕೆ 1,007 ಟನ್‌ಗಳಿಂದ 964 ಟನ್‌ಗಳಿಗೆ ಶೇ 4 ರಷ್ಟು ಇಳಿಕೆಯಾಗಿದೆ.

ಚಿನ್ನದ ಮೇಲಿನ ಹೂಡಿಕೆ ಶೇ 9 ರಷ್ಟು, ಚಿನ್ನದ ಇಟಿಎಫ್‌ ಹೂಡಿಕೆ ಶೇ 46 ರಷ್ಟು ಇಳಿಕೆಯಾಗಿದೆ. ತಂತ್ರಜ್ಞಾನ ವಲಯದಲ್ಲಿ ಚಿನ್ನದ ಬಳಕೆ ಪ್ರಮಾಣ ಶೇ 2 ರಷ್ಟು ಹೆಚ್ಚಾಗಿದ್ದು, 81.5 ಟನ್‌ಗಳಿಂದ 83.3 ಟನ್‌ಗಳಿಗೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !