ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬೆಳವಣಿಗೆ ಶೇ 6.7ರಷ್ಟು: ವಿಶ್ವಸಂಸ್ಥೆ

Published 17 ಮೇ 2023, 15:42 IST
Last Updated 17 ಮೇ 2023, 15:42 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ದೇಶಿ ಬೇಡಿಕೆಯು ಉತ್ತಮವಾಗಿ ಇರುವುದರಿಂದ ಭಾರತದ ಆರ್ಥಿಕತೆಯು 2024ನೇ ಕ್ಯಾಲೆಂಡರ್‌ ವರ್ಷದಲ್ಲಿ ಶೇ 6.7ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ದಕ್ಷಿಣ ಏಷ್ಯಾ ಪ್ರದೇಶದಲ್ಲಿ ದೊಡ್ಡ ಆರ್ಥಿಕತೆ ಆಗಿರುವ ಭಾರತವು 2023ರ ಕ್ಯಾಲೆಂಡರ್‌ ವರ್ಷದಲ್ಲಿ ಶೇ 5.8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಲಾಗಿದೆ. ಆದರೆ ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಬಾಹ್ಯ ಬೇಡಿಕೆಯು ದುರ್ಬಲ ಆಗಿರುವುದರಿಂದಾಗಿ ಈ ವರ್ಷದಲ್ಲಿ ಹೂಡಿಕೆ ಮತ್ತು ರಫ್ತು ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಸರಕುಗಳ ದರ ಇಳಿಕೆ ಆಗಿರುವುದು ಹಾಗೂ ರೂಪಾಯಿ ಮೌಲ್ಯ ಇಳಿಕೆ ಆಗಿರುವುದರಿಂದ ಆಮದಾದ ವಸ್ತುಗಳ ದರವೂ ಕಡಿಮೆ ಆಗಲಿದೆ. ಹೀಗಾಗಿ 2023ರಲ್ಲಿ ಹಣದುಬ್ಬರವು ಶೇ 5.5ಕ್ಕೆ ಇಳಿಕೆ ಕಾಣುವ ನಿರೀಕ್ಷೆ ಇದೆ.

2023ರ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿಯೂ ಭಾರತವು 2023ರಲ್ಲಿ ಶೇ 5.8ರಷ್ಟು ಬೆಳವಣಿಗೆ ಕಾಣುವ ಅಂದಾಜನ್ನು ವರದಿಯಲ್ಲಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT