ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟರ್‌.ಕಾಂ: ಜೂಮ್‌ ಮೀಟಿಂಗ್ ಮೂಲಕವೇ 900 ನೌಕರರ ವಜಾಗೊಳಿಸಿದ ಭಾರತೀಯ ಮೂಲದ ಸಿಇಒ

Last Updated 7 ಡಿಸೆಂಬರ್ 2021, 8:35 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದ ಕಂಪನಿ ‘ಬೆಟರ್‌.ಕಾಂ’ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್ ಗರ್ಗ್ ಅವರು 900ಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ವಜಾಗೊಳಿಸುವ ತೀರ್ಮಾನವನ್ನು ಅವರು ನೌಕರರಿಗೆಜೂಮ್‌ ಆ್ಯಪ್‌ ಮೂಲಕ ವೆಬಿನಾರ್ ಆಯೋಜಿಸಿ ತಿಳಿಸಿದ್ದಾರೆ.

ಸಾಮರ್ಥ್ಯ, ಉತ್ಪಾದಕತೆಯನ್ನು ಆಧಾರವಾಗಿ ಇರಿಸಿಕೊಂಡು ನೌಕರರನ್ನು ವಜಾಗೊಳಿಸಲಾಗಿದೆ ಎಂದು ವಿಶಾಲ್ ಅವರು ಹೇಳಿರುವುದಾಗಿ ಸಿಎನ್‌ಎನ್‌ ವಾಹಿನಿ ವರದಿ ಮಾಡಿದೆ. ವಿಶಾಲ್ ಅವರು ಭಾರತ ಮೂಲದವರು.

‘ನಾನು ಈ ರೀತಿ ಮಾಡುತ್ತಿರುವುದು ನನ್ನ ವೃತ್ತಿ ಜೀವನದಲ್ಲಿ ಇದು ಎರಡನೆಯ ಬಾರಿ. ಈ ರೀತಿ ಮಾಡುವುದು ನನಗೆ ಇಷ್ಟವಿಲ್ಲ. ಹಿಂದಿನ ಬಾರಿ ನೌಕರರನ್ನು ವಜಾಗೊಳಿಸುವ ತೀರ್ಮಾನ ಪ್ರಕಟಿಸುವಾಗ ನಾನು ಅತ್ತಿದ್ದೆ’ ಎಂದು ಗರ್ಗ್ ಅವರು ಜೂಮ್ ಕರೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT