1.35 ಕೋಟಿ ಟನ್ ಖಾದ್ಯತೈಲ ಆಮದು ಅಂದಾಜು

ನವದೆಹಲಿ: ಕೋವಿಡ್–19 ಕಾರಣದಿಂದಾಗಿ ಮನೆ ಮತ್ತು ಹೋಟೆಲ್‌ಗಳಲ್ಲಿ ಖಾದ್ಯತೈಲ ಬಳಕೆ ಕಡಿಮೆಯಾಗಿದೆ. ಖಾದ್ಯ ತೈಲಗಳ ದೇಶಿ ಉತ್ಪಾದನೆ ಹೆಚ್ಚುವ ಸಾಧ್ಯತೆಯೂ ಇದ್ದು, 2020–21ರಲ್ಲಿ ಖಾದ್ಯತೈಲ ಆಮದು 1.25 ಕೋಟಿ ಟನ್‌ಗಳಿಂದ 1.35 ಕೋಟಿ ಟನ್‌ಗಳಷ್ಟಿರುವ ಅಂದಾಜು ಮಾಡಲಾಗಿದೆ ಎಂದು ಸಾಲ್ವೆಂಟ್ ಎಕ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.
2019–20ರ ನವೆಂಬರ್–ಅಕ್ಟೋಬರ್ ಅವಧಿಯಲ್ಲಿ ಖಾದ್ಯತೈಲ ಆಮದು ಶೇ 13ರಷ್ಟು ಕಡಿಮೆಯಾಗಿ 1.35 ಕೋಟಿ ಟನ್‌ಗಳಷ್ಟಾಗಿತ್ತು.
ಈ ಬಾರಿ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಾದರೆ ಅಚ್ಚರಿ ಪಡಬೇಕಾಗಿಲ್ಲ. ಬೆಲೆ ಏರಿಕೆ ಆಗುವ ಸೂಚನೆ ದೊರೆತಿರುವುದರಿಂದ ರೈತರು ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಸಾಸಿವೆಕಾಳು ಬೆಳೆಯುತ್ತಿದ್ದಾರೆ ಎಂದು ಎಸ್‌ಇಎನ ಅಧ್ಯಕ್ಷ ಅತುಲ್ ಚತುರ್ವೇದಿ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.