ಬುಧವಾರ, ಸೆಪ್ಟೆಂಬರ್ 29, 2021
20 °C

ತುಸು ತಗ್ಗಿದ ತಯಾರಿಕಾ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಆಗಸ್ಟ್‌ ತಿಂಗಳಲ್ಲಿ ತುಸು ಇಳಿಕೆ ಕಂಡಿವೆ. ಜುಲೈ ತಿಂಗಳಲ್ಲಿ 55.3ರಷ್ಟು ಇದ್ದ ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (‍ಪಿಎಂಐ), ಆಗಸ್ಟ್‌ನಲ್ಲಿ 52.3ಕ್ಕೆ ಇಳಿದಿದೆ.

ಆದರೆ ಈ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವುದು ತಯಾರಿಕಾ ವಲಯದ ಚಟುವಟಿಕೆಗಳು ಬೆಳವಣಿಗೆ ಕಂಡಿರುವುದನ್ನು ಹೇಳುತ್ತಿವೆ. ಸೂಚ್ಯಂಕವು 50ಕ್ಕಿಂತ ಕಡಿಮೆ ಇದ್ದರೆ ಚಟುವಟಿಕೆಗಳು ಕುಸಿದಿವೆ ಎಂದು ಅರ್ಥೈಸಲಾಗುತ್ತದೆ.

‘ಆಗಸ್ಟ್‌ ತಿಂಗಳಲ್ಲಿ ದೇಶದ ತಯಾರಿಕಾ ವಲಯದ ಚೇತರಿಕೆಯು ಮುಂದುವರಿದಿದೆ. ಆದರೆ, ಚೇತರಿಕೆಯ ವೇಗವು ಕಡಿಮೆ ಆಗಿದೆ. ಬೇಡಿಕೆಯು ತುಸು ಕಡಿಮೆ ಆಗಿದ್ದು ಇದಕ್ಕೆ ಕಾರಣ’ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು