ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ವಿದ್ಯುತ್‌ ಬಳಕೆ ಶೇ 8ರಷ್ಟು ಹೆಚ್ಚಳ

ದೇಶದಲ್ಲಿ ಆರ್ಥಿಕ ಚಟುವಟಿಕೆಯ ಹೆಚ್ಚಳ: ಉದ್ಯಮಿಗಳು
Published 21 ಜನವರಿ 2024, 13:04 IST
Last Updated 21 ಜನವರಿ 2024, 13:04 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ದೇಶದಲ್ಲಿ ವಿದ್ಯುತ್ ಬಳಕೆಯು ಶೇ 8ರಷ್ಟು ಏರಿಕೆಯಾಗಿದೆ.

2022–23ರ ಏಪ್ರಿಲ್‌–ಡಿಸೆಂಬರ್‌ನಲ್ಲಿ ದೇಶದಲ್ಲಿ 1.132 ಲಕ್ಷ ಕೋಟಿ ಯೂನಿಟ್‌ ವಿದ್ಯುತ್ ಬಳಕೆಯಾಗಿದ್ದರೆ, 2023–24ರಲ್ಲಿ 1.221 ಲಕ್ಷ ಕೋಟಿ ಯೂನಿಟ್‌ ಆಗಿದೆ. 

ಶೇ 8ರಷ್ಟು ವಿದ್ಯುತ್‌ ಬಳಕೆಯ ಹೆಚ್ಚಳವು ದೇಶದ ಆರ್ಥಿಕ ಚಟುವಟಿಕೆಯ ಹೆಚ್ಚಳವನ್ನು ತೋರಿಸುತ್ತಿದೆ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

2022–23ರ ಪೂರ್ಣ ಹಣಕಾಸು ವರ್ಷದಲ್ಲಿ 1.504 ಲಕ್ಷ ಕೋಟಿ ಯೂನಿಟ್‌ ಮತ್ತು 2021–22ರಲ್ಲಿ 1.374 ಲಕ್ಷ ಕೋಟಿ ಯೂನಿಟ್‌ ವಿದ್ಯುತ್‌ ಬಳಕೆಯಾಗಿತ್ತು.

ದೇಶದ ವಿದ್ಯುತ್‌ ಬೇಡಿಕೆಯು 2023ರ ಬೇಸಿಗೆಯಲ್ಲಿ 229 ಗಿಗಾವಾಟ್‌ ಮುಟ್ಟಲಿದೆ ಎಂದು ಇಂಧನ ಸಚಿವಾಲಯ ಅಂದಾಜಿಸಿತ್ತು. ಅಕಾಲಿಕ ಮಳೆಯಿಂದಾಗಿ ಬೇಡಿಕೆಯು ಏಪ್ರಿಲ್-ಜುಲೈನಲ್ಲಿ ಯೋಜಿತ ಮಟ್ಟವನ್ನು ತಲುಪಲಿಲ್ಲ.

ತಜ್ಞರ ಪ್ರಕಾರ, ಈ ವರ್ಷದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಬಳಕೆಯ ಮೇಲೆ ಪರಿಣಾಮ ಬೀರಿತು. ಆದರೆ, ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಆರ್ದ್ರ ಹವಾಮಾನ ಪರಿಸ್ಥಿತಿ ಮತ್ತು ಹಬ್ಬದ ಕಾರಣದಿಂದ ಕೈಗಾರಿಕಾ ಚಟುವಟಿಕೆಗಳು ಹೆಚ್ಚಾಗಿದ್ದು, ವಿದ್ಯುತ್‌ ಬಳಕೆಯಲ್ಲೂ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, 2013–14ರಿಂದ 2022–23ರವರೆಗೆ ವಿದ್ಯುತ್‌ ಬೇಡಿಕೆ ಶೇ 50.8ರಷ್ಟು ಏರಿಕೆಯಾಗಿದೆ. 2013–14ರಲ್ಲಿದ್ದ 136 ಗಿಗಾವಾಟ್‌ ವಿದ್ಯುತ್‌ ಬೇಡಿಕೆಯು 2023ರ ಸೆಪ್ಟೆಂಬರ್‌ಗೆ 243 ಗಿಗಾವಾಟ್‌ಗೆ ಏರಿದೆ.

2030ರ ವೇಳೆಗೆ ದೇಶದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 400 ಗಿಗಾವಾಟ್‌ ದಾಟಲಿದೆ. ಇದು ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT