ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರುಗಳಲ್ಲಿ ಸಿಲುಕಿದ ಗೋಧಿ

Last Updated 16 ಮೇ 2022, 15:57 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್): ಗೋಧಿ ರಫ್ತಿಗೆ ನಿಷೇಧ ಹೇರಿದ ಕೇಂದ್ರದ ಕ್ರಮದಿಂದಾಗಿ ಬಂದರುಗಳಲ್ಲಿ ಅಂದಾಜು 18 ಲಕ್ಷ ಟನ್ ಗೋಧಿ ಸಿಲುಕಿಕೊಂಡಿದೆ. ಇದರಿಂದಾಗಿ ವರ್ತಕರು ಭಾರಿ ನಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿದ್ದಾರೆ.

ಬಂದರುಗಳಲ್ಲಿ ಒಟ್ಟು 22 ಲಕ್ಷ ಟನ್ ಗೋಧಿ ಸಿಲುಕಿಕೊಂಡಿದೆ. ಈ ಪೈಕಿ 4 ಲಕ್ಷ ಟನ್‌ಗೆ ಲೆಟರ್ ಆಫ್ ಕ್ರೆಡಿಟ್ ಇದ್ದು, ಇಷ್ಟು ಗೋಧಿಯನ್ನು ರಫ್ತು ಮಾಡಲು ಸಮಸ್ಯೆ ಇಲ್ಲ ಎಂದು ವರ್ತಕರು ತಿಳಿಸಿದ್ದಾರೆ.

ಇನ್ನುಳಿದ 18 ಲಕ್ಷ ಟನ್ ಗೋಧಿಯನ್ನು ಏನು ಮಾಡುವುದು ಎಂಬುದು ಗೊತ್ತಾಗುತ್ತಿಲ್ಲ. ವರ್ತಕರು ಗೋಧಿಯನ್ನು ಮತ್ತೆ ದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT