ಕೈಗಾರಿಕಾ ಬೆಳವಣಿಗೆ ಕುಸಿತ

7

ಕೈಗಾರಿಕಾ ಬೆಳವಣಿಗೆ ಕುಸಿತ

Published:
Updated:

ನವದೆಹಲಿ: ಕೈಗಾರಿಕಾ ತಯಾರಿಕೆ ಬೆಳವಣಿಗೆಯು ನವೆಂಬರ್‌ ತಿಂಗಳಲ್ಲಿ ಶೇ 0.5ರಷ್ಟಾಗಿ, 17 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ತಯಾರಿಕೆ ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಹಕರ ಮತ್ತು ಭಾರಿ ಯಂತ್ರೋಪಕರಣಗಳ ತಯಾರಿಕೆಯಲ್ಲಿನ ಕುಸಿತದ ಫಲವಾಗಿ ಬೆಳವಣಿಗೆ ದರ ಕುಸಿದಿದೆ.

ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಸ್ವರೂಪದಲ್ಲಿ ಅಳೆಯಲಾಗುವ ಕಾರ್ಖಾನೆಗಳ ತಯಾರಿಕೆಯು  ವರ್ಷದ ಹಿಂದಿನ ಇದೇ ಅವಧಿಯಲ್ಲಿ ಶೇ 8.5ರಷ್ಟು ಪ್ರಗತಿ ದಾಖಲಿಸಿತ್ತು. ಈ ವರ್ಷದ ಅಕ್ಟೋಬರ್‌ ತಿಂಗಳ ಪ್ರಗತಿಯನ್ನು ಶೇ 8.1 ರಿಂದ ಶೇ 8.5ಕ್ಕೆ ಪರಿಷ್ಕರಿಸಲಾಗಿದೆ. 2017ರ ಜೂನ್‌ ತಿಂಗಳ ‘ಐಐಪಿ’ ಪ್ರಗತಿಯು ಶೇ 0.3ರಷ್ಟಾಗಿತ್ತು.

ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿನ ಕೈಗಾರಿಕಾ ತಯಾರಿಕೆಯು ಶೇ 5ರಷ್ಟಾಗಿದೆ. ಒಂದು ವರ್ಷದ ಹಿಂದಿನ ಇದೇ ಅವಧಿಯಲ್ಲಿ ಈ ಪ್ರಮಾಣವು ಶೇ 3.2ರಷ್ಟಿತ್ತು. ‘ಐಐಪಿ’ಯಲ್ಲಿ ಶೇ 77.63ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯದ ಪ್ರಗತಿಯು ನವೆಂಬರ್‌ನಲ್ಲಿ ಶೇ 0.4ರಷ್ಟಾಗಿದೆ. ಒಂದು ವರ್ಷದ ಹಿಂದೆ ಇದು ಶೇ 10.4ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್‌ಒ) ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಗಣಿಗಾರಿಕೆ (ಶೇ 2.7), ವಿದ್ಯುತ್‌ (ಶೇ 5.1), ಭಾರಿ ಯಂತ್ರೋಪಕರಣ (ಶೇ 3.4) ಮತ್ತು ಗೃಹೋಪಯೋಗಿ ಸಲಕರಣೆ ತಯಾರಿಕೆಯು ಶೇ 0.9ರಷ್ಟು ಕುಸಿತ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !