ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಬೆಳವಣಿಗೆ ನಾಲ್ಕು ತಿಂಗಳಲ್ಲಿನ ಕನಿಷ್ಠ ಮಟ್ಟಕ್ಕೆ ಕುಂಠಿತ

Last Updated 12 ನವೆಂಬರ್ 2018, 17:02 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ 4.5ರಷ್ಟಿದ್ದು, ನಾಲ್ಕು ತಿಂಗಳಲ್ಲಿನ ಕನಿಷ್ಠ ಮಟ್ಟ ಇದಾಗಿದೆ.

ಗಣಿಗಾರಿಕೆ ಮತ್ತು ಭಾರಿ ಯಂತ್ರೋಪಕರಣ ವಲಯದಲ್ಲಿನ ಕಳಪೆ ಸಾಧನೆಯಿಂದಾಗಿ ಉತ್ಪಾದನೆಯು ಕುಂಠಿತಗೊಂಡಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕೈಗಾರಿಕಾ ಉತ್ಪಾದನೆಯು 2017ರ ಸೆಪ್ಟೆಂಬರ್‌ ತಿಂಗಳಲ್ಲಿ ಶೇ 4.1ರಷ್ಟಿತ್ತು. ವರ್ಷದ ಹಿಂದೆ ಶೇ 7.6ರಷ್ಟು ಏರಿಕೆ ದಾಖಲಿಸಿದ್ದ ಗಣಿಗಾರಿಕೆ ವಲಯವು ಈಗ ಶೇ 0.2ರಷ್ಟು ಕಡಿಮೆಯಾಗಿದೆ. ಭಾರಿ ಯಂತ್ರೋಪಕರಣಗಳ ತಯಾರಿಕೆಯು ಕೂಡ ವರ್ಷದ ಹಿಂದಿನ ಶೇ 8.7ಕ್ಕೆ ಹೋಲಿಸಿದರೆ ಈ ಬಾರಿ ಶೇ 5.8ಕ್ಕೆ ಇಳಿದಿದೆ.

ತಯಾರಿಕಾ ವಲಯವು 2017ರಲ್ಲಿನ ಶೇ 3.8ಕ್ಕೆ ಹೋಲಿಸಿದರೆ ಈ ಬಾರಿ ಶೇ 4.6ರಷ್ಟು ಹೆಚ್ಚಳ ಕಂಡಿದೆ. ವಿದ್ಯುತ್‌ ಉತ್ಪಾದನೆಯೂ ಶೇ 8.2ರಷ್ಟು ಸುಧಾರಣೆ ಕಂಡಿದೆ.

ಈ ವರ್ಷದ ಏ‍ಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ‘ಐಐಪಿ’ ಬೆಳವಣಿಗೆಯು ಶೇ 5.1ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು ಶೇ 2.6ರಷ್ಟಿತ್ತು. 23 ಕೈಗಾರಿಕಾ ಸಮೂಹಗಳ ಪೈಕಿ 17 ಸಮೂಹಗಳು ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT