ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಉತ್ಪಾದನೆ 4 ತಿಂಗಳ ಕನಿಷ್ಠ

Last Updated 12 ಸೆಪ್ಟೆಂಬರ್ 2022, 14:26 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೈಗಾರಿಕಾ ವಲಯದ ಉತ್ಪಾದನೆಯು ಜುಲೈನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದ್ದು, ಶೇಕಡ 2.4ರಷ್ಟು ಆಗಿದೆ.

ಮಾರ್ಚ್‌ನಲ್ಲಿ ವಲಯದ ಬೆಳವಣಿಗೆಯು ಶೇ 2.2ಕ್ಕೆ ಇಳಿಕೆಯಾಗಿತ್ತು. ಅದಾದ ನಂತರದ ಕನಿಷ್ಠ ಮಟ್ಟದ ಬೆಳವಣಿಗೆ ಜುಲೈನಲ್ಲಿ ದಾಖಲಾಗಿದೆ. ತಯಾರಿಕೆ, ವಿದ್ಯುತ್‌ ಮತ್ತು ಗಣಿ ವಲಯಗಳ ಬೆಳವಣಿಗೆಯಲ್ಲಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ.

ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧರಿಸಿದ ಕೈಗಾರಿಕಾ ಬೆಳವಣಿಗೆಯು 2021ರ ಜುಲೈನಲ್ಲಿ ಶೇ 11.5ರಷ್ಟು ಆಗಿತ್ತು.

ತಯಾರಿಕಾ ವಲಯದ ಬೆಳವಣಿಗೆಯು ಕಳೆದ ವರ್ಷದ ಜುಲೈನಲ್ಲಿ ಶೇ 10.5ರಷ್ಟು ಇತ್ತು. ಇದು ಈ ವರ್ಷದ ಜುಲೈನಲ್ಲಿ ಶೇ 3.2ಕ್ಕೆ ಕುಗ್ಗಿದೆ.

ವಿದ್ಯುತ್‌ ವಲಯದ ಬೆಳವಣಿಗೆಯು ಶೇ 11.1ರಷ್ಟು ಇದ್ದಿದ್ದು ಶೇ 2.3ಕ್ಕೆ ಇಳಿಕೆ ಆಗಿದೆ. ಗಣಿ ವಲಯದ ಬೆಳವಣಿಗೆ 19.5ರಷ್ಟು ಇದ್ದಿದ್ದು ಶೇ 3.3ಕ್ಕೆ ಕುಸಿದಿದೆ. ಬಂಡವಾಳ ಸರಕುಗಳ ಬೆಳವಣಿಗೆಯು ಶೇ 30.3ರಿಂದ ಶೇ 5.8ಕ್ಕೆ ಇಳಿಕೆ ಆಗಿದೆ.

ಸೂಚ್ಯಂಕಕ್ಕೆ ಶೇ 34ರಷ್ಟು ಕೊಡುಗೆ ನೀಡುವ ಪ್ರಾಥಮಿಕ ಸರಕುಗಳ ಬೆಳವಣಿಗೆಯು ಶೇ 2.5ರಷ್ಟು ಆಗಿದೆ. ಹಿಂದಿನ ಅವಧಿಯಲ್ಲಿ ಶೇ 12.4ರಷ್ಟು ಬೆಳವಣಿಗೆ ಕಂಡಿತ್ತು.

ಏಪ್ರಿಲ್‌–ಜುಲೈ ಅವಧಿಯಲ್ಲಿ ಐಐಪಿ ಶೇ 10ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 33.9ರಷ್ಟು ಬೆಳವಣಿಗೆ ದಾಖಲಾಗಿತ್ತು.

ಬೆಳವಣಿಗೆ ಪ್ರಮಾಣ (%)

ಮಾರ್ಚ್‌;2.2

ಏಪ್ರಿಲ್‌;6.7

ಮೇ;19.6

ಜೂನ್‌;12.7

ಜುಲೈ;2.4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT