ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಪತ್ರ ಅಕ್ರಮದ ಬಗ್ಗೆ ಸಮಗ್ರ ತನಿಖೆ: ನಂದನ್‌ ನಿಲೇಕಣಿ ಭರವಸೆ

ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ಹೇಳಿಕೆ
Last Updated 22 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ನವದೆಹಲಿ: ಲೆಕ್ಕಪತ್ರದಲ್ಲಿ ಅಕ್ರಮ ಎಸಗಿರುವುದನ್ನು ಬಯಲಿಗೆ ಎಳೆದಿರುವ ಅನಾಮಧೇಯರ ಆರೋಪಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ಹೇಳಿದ್ದಾರೆ.

‘ಅನಾಮಧೇಯರಿಂದ ಎರಡು ದೂರುಗಳು ಸಲ್ಲಿಕೆಯಾಗುತ್ತಿದ್ದಂತಯೇ ಲೆಕ್ಕಪತ್ರ ಸಮಿತಿ ಮತ್ತು ಕಾರ್ಯನಿರ್ವಾಹಕಯೇತರ ಸದಸ್ಯರ ಮುಂದೆ ಅವುಗಳನ್ನು ಮಂಡಿಸಲಾಗಿದೆ. ಸಮಿತಿಯು ಸ್ವತಂತ್ರ ಆಂತರಿಕ ಲೆಕ್ಕಪತ್ರ ತಪಾಸಣಾ ಸಂಸ್ಥೆ ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಮತ್ತು ಕಾನೂನು ಸಂಸ್ಥೆ ಶಾರ್ದೂಲ್‌ ಅಮರ್‌ಚಂದ್‌ ಮಂಗಲದಾಸ್‌ ಆ್ಯಂಡ್‌ ಕಂಪನಿ ಜತೆ ಚರ್ಚೆ ಆರಂಭಿಸಿದೆ’ ಎಂದು ನಿಲೇಕಣಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ದೂರುಗಳನ್ನು ವಸ್ತುನಿಷ್ಟವಾಗಿ ಪರಿಗಣಿಸಲಾಗುವುದು. ದೂರುಗಳು ಮುಖ್ಯವಾಗಿ ಸಿಇಒ ಪಾರೇಖ್‌ ಅವರ ವಿದೇಶ ಮತ್ತು ಮುಂಬೈ ಪ್ರವಾಸಕ್ಕೆ ಸಂಬಂಧಿಸಿವೆ. ದೂರುಗಳ ಜತೆ ಯಾವುದೇ ಸಾಕ್ಷ್ಯಾಧಾರ
ಗಳನ್ನು ಒದಗಿಸಿಲ್ಲ. ಸ್ವತಂತ್ರವಾಗಿ ತನಿಖೆ ನಡೆಯುವುದಕ್ಕೆ ಪೂರಕವಾಗಿ ಸಿಇಒ ಮತ್ತು ಸಿಎಫ್‌ಒ ಈ ಪ್ರಕರಣದಿಂದ ದೂರ ಉಳಿದಿದ್ದಾರೆ. ಕಂಪನಿಯ ಶಾಸನಬದ್ಧ ಲೆಕ್ಕಪತ್ರ ತಪಾಸಣಾ ಸಂಸ್ಥೆಯಾಗಿರುವ ಡೆಲಾಯ್ಟಗೆ ಈ ವಿಷಯದ ಸಮಗ್ರ ಮಾಹಿತಿ ನೀಡಲಾಗಿದೆ’ ಎಂದು ನಂದನ್‌ ಅವರು ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗುವುದರ ಮೂಲಕ ವರಮಾನ ಮತ್ತು ಲಾಭ ಹೆಚ್ಚಿಸಿಕೊಳ್ಳಲು ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಒ ನಿಲಂಜನ್‌ ರಾಯ್‌ ಅವರು ನೈತಿಕವಲ್ಲದ ವಿಧಾನ ಅನುಸರಿಸಿದ್ದಾರೆ ಎಂದು ಅಕ್ರಮಗಳನ್ನು ಬಯಲಿಗೆ ಎಳೆದಿರುವ ಅನಾಮಧೇಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT