ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌, ವಿಪ್ರೊ ಲಾಭ ಹೆಚ್ಚಳ

Last Updated 13 ಜನವರಿ 2021, 14:39 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾದ ಇನ್ಫೊಸಿಸ್‌, ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 5,197 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 4,457 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಈ ಬಾರಿ ಶೇಕಡ 16.6ರಷ್ಟು ಏರಿಕೆ ಆಗಿದೆ.

ವರಮಾನ ಸಂಗ್ರಹವು ₹ 23,092 ಕೋಟಿಗಳಿಂದ ₹ 25,927 ಕೋಟಿಗಳಿಗೆ ಶೇ 12.3ರಷ್ಟು ವೃದ್ಧಿಯಾಗಿದೆ. ‘ಇನ್ಫೊಸಿಸ್ ತಂಡವು ಮತ್ತೊಂದು ತ್ರೈಮಾಸಿಕದಲ್ಲಿಯೂ ಉತ್ತಮ ಫಲಿತಾಂಶ ನೀಡಿದೆ. ಡಿಜಿಟಲ್‌ ಸ್ಥಿತ್ಯಂತರಕ್ಕೆ ಗಮನ ನೀಡಿರುವ ಗ್ರಾಹಕ ಕೇಂದ್ರಿತ ಕಾರ್ಯತಂತ್ರವು ಉತ್ತಮ ಬೆಳವಣಿಗೆಗೆ ಕಾರಣವಾಗಲಿದೆ’ ಎಂದು ಇನ್ಫೊಸಿಸ್ ಸಿಇಒ ಸಲೀಲ್‌ ಪಾರೀಖ್‌ ಹೇಳಿದ್ದಾರೆ.

ವಿಪ್ರೊ ಲಾಭ ಹೆಚ್ಚಳ: ದೇಶದ ಇನ್ನೊಂದು ಪ್ರಮುಖ ಐ.ಟಿ. ಸೇವಾ ಕಂಪನಿಯಾದ ವಿಪ್ರೊ, ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 2,968 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಆಗಿದ್ದ ₹ 2,455 ಕೋಟಿ ಲಾಭಕ್ಕೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭದಲ್ಲಿ ಶೇ 21ರಷ್ಟು ಏರಿಕೆ ಕಂಡುಬಂದಿದೆ.

ಕಾರ್ಯಾಚರಣಾ ವರಮಾನ ಶೇ 1.3ರಷ್ಟು ಹೆಚ್ಚಾಗಿದ್ದು ₹ 15,670 ಕೋಟಿಗಳಿಗೆ ತಲುಪಿದೆ. ‘ಬೇಡಿಕೆಯು ನಿಧಾನವಾಗಿ ಸುಧಾರಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಡಿಜಿಟಲ್‌ ಸ್ಥಿತ್ಯಂತರ, ಡಿಜಿಟಲ್‌ ಕಾರ್ಯಾಚರಣೆ ಹಾಗೂ ಕ್ಲೌಡ್‌ ಸೇವೆಗಳಲ್ಲಿ ಬೆಳವಣಿಗೆ ಕಂಡುಬರುತ್ತಿದೆ’ ಎಂದು ಕಂಪನಿ ಹೇಳಿದೆ.

ಲಾಭಾಂಶ: ಕಂಪನಿಯು ಪ್ರತಿ ಷೇರಿಗೆ ₹ 1ರ ಲಾಭಾಂಶ ಘೋಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT