ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ವಲಯ: ₹54 ಸಾವಿರ ಕೋಟಿ ಎಫ್‌ಡಿಐ

Published 18 ಮಾರ್ಚ್ 2024, 16:03 IST
Last Updated 18 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿಮಾ ವಲಯವು ಕಳೆದ 9 ವರ್ಷದಲ್ಲಿ ₹54 ಸಾವಿರ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಸ್ವೀಕರಿಸಿದೆ‌.

ಸರ್ಕಾರವು ಸಾಗರೋತ್ತರ ಬಂಡವಾಳ ಹರಿವಿನ ನಿಯಮಾವಳಿಗಳನ್ನು ಮತ್ತಷ್ಟು ಉದಾರೀಕರಣ ಮಾಡಿದ್ದರಿಂದ ವಿಮಾ ವಲಯದಲ್ಲಿ ಈ ಬಂಡವಾಳದ ಒಳಹರಿವು ಆಗಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್‌ ಜೋಶಿ ಪಿಟಿಐಗೆ ತಿಳಿಸಿದ್ದಾರೆ.

2014ರ ಡಿಸೆಂಬರ್‌ನಿಂದ 2024ರ ಜನವರಿ ನಡುವೆ ₹53,900 ಕೋಟಿಯಷ್ಟು ಎಫ್‌ಡಿಐನ್ನು ವಿಮಾ ಕಂಪನಿಗಳು ಸ್ವೀಕರಿಸಿವೆ. ಇದೇ ಅವಧಿಯಲ್ಲಿ ವಿಮಾ ಕಂಪನಿಗಳ ಸಂಖ್ಯೆಯು 53ರಿಂದ 70ಕ್ಕೆ ಹೆಚ್ಚಳವಾಗಿದೆ.

2013–14ರಲ್ಲಿ ₹21 ಲಕ್ಷ ಕೋಟಿಯಿದ್ದ ನಿರ್ವಹಣಾ ಸಂಪತ್ತಿನ ಮೌಲ್ಯವು (ಎಯುಎಂ) ಪ್ರಸ್ತುತ ₹60 ಲಕ್ಷ ಕೋಟಿಗೆ ಏರಿಕೆ ಆಗಿದೆ. ವಿಮಾ ಪ್ರೀಮಿಯಂ ₹3.94 ಲಕ್ಷ ಕೋಟಿಯಿಂದ ₹10.4 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT