ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಕಂಪನಿಗಳಿಗೆ ₹ 18,480 ಕೋಟಿ ನಷ್ಟ

Last Updated 7 ಆಗಸ್ಟ್ 2022, 10:52 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಒಟ್ಟು ₹ 18,480 ಕೋಟಿ ನಷ್ಟವಾಗಿದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ (ಬಿ‍ಪಿಸಿಎಲ್‌) ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಕಂಪನಿಗಳು ಜೂನ್‌ ತ್ರೈಮಾಸಿಕದಲ್ಲಿ ಒಟ್ಟು ₹ 10,700 ಕೋಟಿ ನಷ್ಟ ಅನುಭವಿಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ಈ ಹಿಂದೆ ಅಂದಾಜು ಮಾಡಿತ್ತು. ಅಂದಾಜಿಗೆ ಹೋಲಿಸಿದರೆ ನಷ್ಟ ಹೆಚ್ಚಾಗಿದೆ.

ಏಪ್ರಿಲ್‌–ಜೂನ್ ಅವಧಿಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿದ್ದರೂ, ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ದರ ಪರಿಷ್ಕರಣೆ ಮಾಡದೇ ಇರುವುದರಿಂದ ಕಂಪನಿಗಳಿಗೆ ನಷ್ಟವಾಗಿದೆ.

ಬಿಪಿಸಿಎಲ್‌ ನಷ್ಟ ₹ 6,291 ಕೋಟಿ: ಏಪ್ರಿಲ್‌–ಜೂನ್‌ ಅವಧಿಯಲ್ಲಿ ಬಿಪಿಸಿಎಲ್‌ ₹ 6,291 ಕೋಟಿ ನಷ್ಟ ಅನುಭವಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 3,192 ಕೋಟಿ ಲಾಭ ಗಳಿಸಿತ್ತು. ಕಾರ್ಯಾಚರಣೆ ವರಮಾನವು ₹ 89,688 ಕೋಟಿಯಿಂದ ₹ 1.38 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT