ಎಜ್ಬಾಸ್ಟನ್: ನಾಯಕ ಶುಭಮನ್ ಗಿಲ್ ಅಮೋಘ ದ್ವಿಶತಕದ ನೆರವಿನಿಂದ ಆತಿಥೇಯ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ 587 ರನ್ಗಳ ಬೃಹತ್ ಮೊತ್ತ ಪೇರಿಸಿದೆ.

ಟೀಮ್ ಇಂಡಿಯಾದ ನಾಯಕ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿದರು.

ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ 87 ರನ್ ಗಳಿಸಿದ್ದರೆ ಎರಡನೇ ದಿನದಾಟದಲ್ಲಿ ರವೀಂದ್ರ ಜಡಂಜ 89 ರನ್ ಗಳಿಸಿ ನಾಯಕನಿಗೆ ಉತ್ತಮ ಬೆಂಬಲ ನೀಡಿದರು.

ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 42 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.

ಇಂದು ಕಲಾತ್ಮಕ ಇನಿಂಗ್ಸ್ ಕಟ್ಟಿದ ಗಿಲ್ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಗಿಲ್ 387 ಎಸೆತಗಳಲ್ಲಿ 269 ರನ್ ಗಳಿಸಿ ಔಟ್ ಆದರು. ನಾಯಕನ ಇನಿಂಗ್ಸ್ನಲ್ಲಿ 30 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸೇರಿದ್ದವು.

ಅಲ್ಲದೆ ರವೀಂದ್ರ ಜಡೇಜ ಅವರೊಂದಿಗೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದರು. ಅತ್ತ ವಾಷಿಂಗ್ಟನ್ ಅವರೊಂದಿಗೂ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ.
.2ನೇ ಟೆಸ್ಟ್ ಕ್ರಿಕೆಟ್: ಶುಭಮನ್ ಗಿಲ್ ಅಮೋಘ ಶತಕದ ಲಯ.U19 ODI: ಸೂರ್ಯವಂಶಿ 9 ಸಿಕ್ಸರ್; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.