ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಆರ್‌ ಪರಾಮರ್ಶೆಗೆ ಒಂದೇ ದಿನ

₹ 4,242 ಕೋಟಿ ಮೊತ್ತದ ಯೋಜನೆಗೆ ‘ಇನ್ಫಿ’ ಆಯ್ಕೆ
Last Updated 16 ಜನವರಿ 2019, 18:02 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರಗಳನ್ನು (ಐ.ಟಿ ರಿಟರ್ನ್ಸ್‌) ತ್ವರಿತವಾಗಿ ಪರಿಶೀಲಿಸುವ ಹೊಸ ಯೋಜನೆ ಜಾರಿಗೆ ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌ ಆಯ್ಕೆಯಾಗಿದೆ.

ಈ ಯೋಜನೆಗೆ ₹ 4,242 ಕೋಟಿ ಬಿಡುಗಡೆ ಮಾಡಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಐ.ಟಿ ರಿಟರ್ನ್ಸ್‌ಗಳನ್ನು ಒಂದೇ ದಿನದಲ್ಲಿ ಪರಿಶೀಲಿಸಿ ತೆರಿಗೆದಾರರಿಗೆ ತಕ್ಷಣ ಮರು ಪಾವತಿ ಮಾಡಲು ಇದರಿಂದ ಸಾಧ್ಯವಾಗಲಿದೆ.

‘ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಸಮಗ್ರ ಇ–ಫೈಲಿಂಗ್‌ ಮತ್ತು ಕೇಂದ್ರೀಕೃತ ರಿಟರ್ನ್ಸ್‌ ಪರಿಶೀಲನಾ ಕೇಂದ್ರದಲ್ಲಿ ಹೊಸ ತಲೆಮಾರಿನ ತಂತ್ರಜ್ಞಾನ ಬಳಕೆಗೆ ಸಮ್ಮತಿ ನೀಡಿದೆ’ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

‘ಸದ್ಯಕ್ಕೆ ಐ.ಟಿ ರಿಟರ್ನ್ಸ್‌ಗಳ ಪರಿಶೀಲನೆಗೆ ಗರಿಷ್ಠ 63 ದಿನಗಳು ಬೇಕಾಗುತ್ತವೆ. ಈ ಯೋಜನೆ ಜಾರಿಗೆ ತರುವುದರಿಂದ ಈ ಅವಧಿಯು ಒಂದೇ ದಿನಕ್ಕೆ ಇಳಿಯಲಿದೆ. ಮೂರು ತಿಂಗಳ ಕಾಲ ಪರೀಕ್ಷಿಸಿದ ನಂತರ ಯೋಜನೆ ಜಾರಿಗೆ ಬರಲಿದೆ. 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ ಸಂಬಂಧ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇನ್ಫೊಸಿಸ್‌ ಆಯ್ಕೆಯಾಗಿದೆ. ಹೊಸ ಯೋಜನೆಯು ಇನ್ನಷ್ಟು ತೆರಿಗೆ ಸ್ನೇಹಿಯಾಗಿರಲಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ತೆರಿಗೆದಾರರಿಗೆ ₹ 1.83 ಲಕ್ಷ ಕೋಟಿ ಮರು ಪಾವತಿಸಲಾಗಿದೆ. ಈ ಯೋಜನೆಯು ಐ.ಟಿ ರಿಟರ್ನ್ಸ್‌ಗಳಿಗೆ ಹೆಚ್ಚಿನ ಪಾರದರ್ಶಕತೆ, ಉತ್ತರದಾಯಿತ್ವ ಒದಗಿಸಲಿದೆ’ ಎಂದೂ ಗೋಯಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT