‘ಐಟಿಸಿ’ ನೌಕರರಿಗೆ ಪ್ರತಿಷ್ಠಿತ ಪ್ರಶಸ್ತಿ

7

‘ಐಟಿಸಿ’ ನೌಕರರಿಗೆ ಪ್ರತಿಷ್ಠಿತ ಪ್ರಶಸ್ತಿ

Published:
Updated:

ಬೆಂಗಳೂರು: ಕಾನ್ಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಯಂಗ್‌ ಲಯನ್ಸ್‌’ ಸ್ಪರ್ಧೆಯಲ್ಲಿ, ‘ಐಟಿಸಿ’ಯ ಇಬ್ಬರು ಯುವ ಮ್ಯಾನೇಜರುಗಳು ‘ಸಿಲ್ವರ್‌ ಲಯನ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ, ಐಟಿಸಿಯ ವೈಯಕ್ತಿಕ ಕಾಳಜಿ ಉತ್ಪನ್ನಗಳ ವಿಭಾಗದ ರೈಸಾ ಚಕ್ರವರ್ತಿ ಮತ್ತು ಅನುಪಮಾ ಶರ್ಮಾ ಅವರು ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಬ್ಬರೂ ಇದಕ್ಕೂ ಮೊದಲು ಭಾರತದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿಯೂ ಜಯ ಸಾಧಿಸಿದ್ದರು.

ಉತ್ಪನ್ನ ಅಥವಾ ಸೇವೆಯ ಬಗ್ಗೆ ಗ್ರಾಹಕರ ಗಮನ ಸೆಳೆಯುವುದರ ಕುರಿತು ಯುವ ಮಾರಾಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲು ಈ ಸ್ಪರ್ಧೆ ವೇದಿಕೆ ಕಲ್ಪಿಸಿತ್ತು. ಯುವ ಪ್ರತಿಭಾನ್ವಿತ ವೃತ್ತಿನಿರತರನ್ನು ಉತ್ತೇಜಿಸಲು ಸಂಸ್ಥೆಯು ಬದ್ಧವಾಗಿದೆ ಎಂದು ಐಟಿಸಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !