ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್‌ ಏರ್‌ವೇಸ್‌ನಲ್ಲಿ ₹100 ಕೋಟಿ ಹೂಡಿಕೆ: ಜಲನ್ ಕಲ್‌ರಾಕ್‌ ಒಕ್ಕೂಟ

Published 29 ಸೆಪ್ಟೆಂಬರ್ 2023, 13:37 IST
Last Updated 29 ಸೆಪ್ಟೆಂಬರ್ 2023, 13:37 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕವಾಗಿ ದಿವಾಳಿ ಆಗಿರುವ ಜೆಟ್‌ ಏರ್‌ವೇಸ್‌ ಕಂಪನಿಯ ಪುನಶ್ಚೇತನಕ್ಕಾಗಿ ಹೆಚ್ಚುವರಿ ₹100 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಜಲನ್‌ ಕಾಲ್‌ರಾಕ್‌ ಒಕ್ಕೂಟವು ಶುಕ್ರವಾರ ಹೇಳಿದೆ.

ಈ ಮೊತ್ತವನ್ನೂ ಒಳಗೊಂಡು ಕಂಪನಿಯ ಪುನಶ್ಚೇತನಕ್ಕಾಗಿ ಒಟ್ಟು ₹350 ಕೋಟಿ ಹೂಡಿಕೆ ಮಾಡಲಾಗಿದೆ. ಜೆಟ್‌ ಏರ್‌ವೇಸ್‌ನ ಮಾಲೀಕತ್ವವನ್ನು ಹೊಂದಲು ಇದು ದಾರಿ ಮಾಡಿಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ವರ್ಷದಿಂದ ವಿಮಾನ ಕಾರ್ಯಾಚರಣೆ ಆರಂಭ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದು, ಕೆಲವೇ ದಿನಗಳಲ್ಲಿ ಕಾರ್ಯಾಚರಣೆಯ ದಿನಾಂಕದ ಮಾಹಿತಿ ನೀಡಲಾಗುವುದು ಎಂದು ಒಕ್ಕೂಟವು ಹೇಳಿದೆ.

2019ರ ಏಪ್ರಿಲ್‌ 17ರಿಂದ ಜೆಟ್‌ ಏರ್‌ವೇಸ್‌ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT