ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ಜಿ ಡೌನ್‌ಲೋಡ್‌ ವೇಗ: ಮುಂಚೂಣಿಯಲ್ಲಿ ಜಿಯೊ

Last Updated 17 ನವೆಂಬರ್ 2021, 16:00 IST
ಅಕ್ಷರ ಗಾತ್ರ

ನವದೆಹಲಿ: 4ಜಿ ಡೌನ್‌ಲೋಡ್‌ ವೇಗಕ್ಕೆ ಸಂಬಂಧಿಸಿದಂತೆ ಜಿಯೊ ಕಂಪನಿಯು ಅಕ್ಟೋಬರ್‌ನಲ್ಲಿ ಮೊದಲ ಸ್ಥಾನದಲ್ಲಿದ್ದು, ಡೌನ್‌ಲೋಡ್‌ ವೇಗವು ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್‌ ಇದೆ ಎಂದು ಟ್ರಾಯ್‌ ಮಾಹಿತಿ ನೀಡಿದೆ.

ಆದರೆ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳ ಡೌನ್‌ಲೋಡ್‌ ವೇಗವು ಹೆಚ್ಚಾಗುತ್ತಿರುವುದರಿಂದ ಜಿಯೊ ನೆಟ್‌ವರ್ಕ್‌ ಜೊತೆಗಿನ ಅಂತರವು ಕಡಿಮೆ ಆಗುತ್ತಿದೆ ಎಂದು ತಿಳಿಸಿದೆ.

ಏರ್‌ಟೆಲ್‌ 4ಜಿ ಡೇಟಾ ಡೌನ್‌ಲೋಡ್‌ ವೇಗವು ಅಕ್ಟೋಬರ್‌ನಲ್ಲಿ 13.2 ಎಂಬಿಪಿಎಸ್‌ ಇದೆ. ವಿಐಎಲ್‌ 4ಜಿ ವೇಗವು 15.6 ಎಂಬಿಪಿಎಸ್‌ ಇದೆ.

ಅಕ್ಟೋಬರ್‌ನಲ್ಲಿ ವಿಐಎಲ್‌ 4ಜಿ ಅಪ್‌ಲೋಡ್‌ ವೇಗವು 7.6 ಎಂಬಿಪಿಎಸ್‌ ಇದ್ದು, ಮೊದಲ ಸ್ಥಾನ ಪಡೆದುಕೊಂಡಿದೆ. ಜಿಯೊಅಪ್‌ಲೋಡ್‌ ವೇಗವು 6.4 ಎಂಬಿಪಿಎಸ್‌ ಮತ್ತು ಏರ್‌ಟೆಲ್‌ ವೇಗವು 5.2 ಎಂಬಿಪಿಎಸ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT