ಗುರುವಾರ , ಜೂನ್ 4, 2020
27 °C
"ಕೋವಿಡ್‌–19' lಆರ್ಥಿಕತೆ ಮೇಲಾಗುವ ಪರಿಣಾಮ

ಕೋವಿಡ್-19|ಉದ್ಯೋಗ ನಷ್ಟ, ಬಡತನ ಹೆಚ್ಚಳ:ಅಂತರರಾಷ್ಟ್ರೀಯ ಸಲಹಾ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

HUNGRY

ನವದೆಹಲಿ: ಕೋವಿಡ್‌ನಿಂದ ದೇಶದ ಆರ್ಥಿಕತೆ ಮೇಲಾಗಿರುವ ಪರಿಣಾಮದಿಂದಾಗಿ 13.5 ಕೋಟಿ ಉದ್ಯೋಗ ನಷ್ಟವಾಗಲಿದ್ದು, ಇದರಿಂದ 12 ಕೋಟಿ ಮಂದಿ ಬಡತನಕ್ಕೆ ಒಳಗಾ ಗಲಿದ್ದಾರೆ ಎಂದು ಅಂತರರಾಷ್ಟ್ರೀಯ ಸಲಹಾ ಸಂಸ್ಥೆ ಆರ್ಥರ್ ಡಿ. ಲಿಟ್ಲ್ ಹೇಳಿದೆ.

‌ದೇಶದಾದ್ಯಂತ ಲಾಕ್‌ಡೌನ್‌ ಜಾರಿ ಯಲ್ಲಿ ಇರುವುದರಿಂದ ಜನರ ಆದಾಯ ಕಡಿಮೆಯಾಗಿದೆ. ಇದರಿಂದ ವೆಚ್ಚ ಮತ್ತು ಉಳಿತಾಯವೂ ಗಣನಿಯವಾಗಿ ಇಳಿಕೆಯಾಗುತ್ತಿದೆ.

ಕೋವಿಡ್‌ನಿಂದ ಭಾರತವು ಅತಿ ಹೆಚ್ಚಿನ ಅಡ್ಡಪರಿಣಾಮಗಳನ್ನು ಎದುರಿ ಸಲಿದೆ. ಭಾರಿ ಸಂಖ್ಯೆಯಲ್ಲಿ ಉದ್ಯೋಗ ನಷ್ಟ, ಬಡತನ  ಹೆಚ್ಚಳ ಮತ್ತು ತಲಾ ಆದಾಯದಲ್ಲಿ ಇಳಿಕೆ ಆಗಲಿದೆ. ಇವೆಲ್ಲ ವುಗಳ ಒಟ್ಟಾರೆ ಪರಿಣಾಮವಾಗಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಭಾರಿ ಇಳಿಕೆ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು