ನವದೆಹಲಿ: ಕಲ್ಯಾಣ್ ಜುವೆಲರ್ಸ್ ಇಂಡಿಯಾ ಲಿಮಿಟೆಡ್‌ನ ಷೇರುಗಳನ್ನುಸಾರ್ವಜನಿಕರಿಗೆ ಮುಕ್ತವಾಗಿಸುವ (ಐಪಿಒ) ಪ್ರಸ್ತಾವನೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಿದೆ.

₹ 1,000 ಕೋಟಿವರೆಗಿನ ಹೊಸ ಷೇರುಗಳು ಹಾಗೂ ₹ 750 ಕೋಟಿ ಮೊತ್ತದ ಆಫರ್ ಫಾರ್ ಸೇಲ್ (ಒಎಫ್‌ಸಿ) ಸೇರಿ ಒಟ್ಟಾರೆ ₹ 1,750 ಕೋಟಿ ಮೊತ್ತದ ಐಪಿಒ ಇದಾಗಿದೆ.

ಕಲ್ಯಾಣ್ ಜುವೆಲರ್ಸ್‌ನ ಸ್ಥಾಪಕ ಟಿ.ಎಸ್. ಕಲ್ಯಾಣರಾಮನ್ ಅವರು ₹ 250 ಕೋಟಿ ಮೊತ್ತದ ಷೇರುಗಳನ್ನು ಮಾರಲಿದ್ದಾರೆ. ಹೈಡೆಲ್ ಇನ್‌ವೆಸ್ಟ್‌ಮೆಂಟ್ ಲಿಮಿಟೆಡ್ ₹ 500 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಲಿದೆ. ಕಲ್ಯಾಣ್ ಜುವೆಲರ್ಸ್ ಆಗಸ್ಟ್ 15ರಂದು ಐಪಿಒ ಸಂಬಂಧ ಸೆಬಿಗೆ ಕರಡು ಪತ್ರ ಸಲ್ಲಿಸಿತ್ತು.

ಐಪಿಒ ಮೂಲಕ ಸಂಗ್ರಹಿಸುವ ಮೊತ್ತವನ್ನು ದುಡಿಯುವ ಬಂಡವಾಳವಾಗಿ ಹಾಗೂ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಿಕೊಳ್ಳುವುದಾಗಿ ಕಂಪನಿ ತಿಳಿಸಿದೆ. ಜೂನ್ ಅಂತ್ಯದ ವೇಳೆಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 107 ಷೋರೂಂಗಳನ್ನು ಕಂಪನಿ ಹೊಂದಿತ್ತು.

ಆಕ್ಸಿಸ್ ಕ್ಯಾಪಿಟಲ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಐಸಿಐಸಿಐ ಸೆಕ್ಯುರಿಟೀಸ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಈ ಐಪಿಒ ನಿರ್ವಹಣೆ ಮಾಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.